೯೭೧ ನೇ ವರ್ಷದ ಜಯಂತಿಯ ಪರ್ವ ಸಮಾರಾಧನ ಸದ್ಭವನಾ ಪಾದಯಾತ್ರೆ

ರಾಯಚೂರು.ಸೆ.೦೪- ಅನಾದಿ ಕಾಲದಿಂದಲೂ ಸನಾತನ ಹಿಂದೂ ಧರ್ಮದ ಸಂದೇಶಗಳನ್ನು ಸಾರುವಲ್ಲಿ ಮಠಗಳು ಕೆಲಸ ಮಾಡುತ್ತಿವೆ ಎಂದು ಶ್ರೀಮದ್ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ೧೦೦೮ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಮಹಾಭಗವತ್ಪಾದಕರು ಅಶೀರ್ವಚನ ನೀಡಿದರು.
ಅವರಿಂದು ಜೀವೈಕ್ಯ ಕೋಳಂಕಿ ಗುರುಪಾದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ೯೭೧ ನೇ ವರ್ಷದ ಜಯಂತಿಯ ಪರ್ವ ಸಮಾರಾಧನ ಸದ್ಭವನಾ ಪಾದಯಾತ್ರೆಯನ್ನು ಆರಂಭಿಸಿ ಮಾತಾನಾಡಿದರು. ನಗರದ ಕಿಲ್ಲೇ ಬೃಹನ್ಮಠದ ಮಠಾಧೀಶರಾದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಸೋಮವಾರ ಪೇಟೆ ಅಭಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿ, ನವಲಕಲ್ ಅಭಿನವ ಸೋಮನಾಥ ಶಿವಾಚಾರ್ಯ, ನೀಲಗಲ್ ಪಂಚಾಕ್ಷರಿ ಶಿವಾಚಾರ್ಯ, ತಂಡಿಕೆರ ಗಂಗಾಧರ ಶಿವಾಚಾರ್ಯ, ರೌಡಕುಂದ ಸದಾನಂದ ಶರಣರು, ಚೇಗುಂಟ ಕ್ಷೀರಲಿಂಗೇಶ್ವರ ಶರಣರು, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಶಂಕರಪ್ಪ, ನಗರಸಭ ಮಾಜಿ ಅಧ್ಯಕ್ಷರಾದ ಮಾರೆಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ್, ನಗರಸಭೆ ಸದಸ್ಯರಾದ ದರೂರು ಬಸವರಾಜ, ಪವನಕುಮಾರ, ಶಿವಮೂರ್ತಿ, ಅಂಜಿನೇಯ್ಯ ಸೇರಿದಂತೆ ಭಕ್ತರು ಭಾಗವಹಿಸಿದ್ದರು.
ನಂತರ ಜಗದ್ಗುರು ದಿವ್ಯಸಾನಿಧ್ಯದಲ್ಲಿ ಸಾರೋಟ ಉತ್ಸವ ನಡೆಯಿತು. ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದಿಂದ ಕೋಳಂಕಿವರಗೆ ೧೬ ನೇ ವರ್ಷದ ಸದ್ಬಾ ವನಾ ಪಾದೆಯಾತ್ರೆಯನ್ನು ಹಮ್ಮಿಕೋಳ್ಳಲಾಯಿತು.