೯೫ನೇ ಜಾತ್ರಮಹೋತ್ಸವ ಅಂಗವಾಗಿ ನಡೆದ ಸಾಧ್ಭವನ ಪಾದಯಾತ್ರೆ

ಮಾನ್ವಿ,ಆ.೧೪-
ಪಟ್ಟಣದ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಹಾಶಿವಯೋಗಿಗಳ ೯೫ನೇ ಜಾತ್ರಮಹೋತ್ಸವ ಅಂಗವಾಗಿ ನಡೆದ ಸಾಧ್ಭವನ ಪಾದಯಾತ್ರೆಯ ಧರ್ಮಸಭೆಯನ್ನು ಉದ್ಘಾಟಿಸಿ ಮಾನ್ವಿ ಮುಕ್ತಗುಚ್ಚ ಕಲ್ಮಠದ ಶ್ರೀ ವಿರೋಪಾಕ್ಷ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಜಗತ್ತಿನ ಗುರು,ವಿರಕ್ತಮಠಗಳಲ್ಲಿನ ಎಲ್ಲಾ ಕಾವಿಧಾರಿಗುರುಗಳು ಶ್ರಮಿಸುವುದು ಲೋಕಕಲ್ಯಾಣ ಹಾಗೂ ಭಕ್ತರ ಉದ್ದಾರವನ್ನು ಮಾಡುವುದಕ್ಕಾಗಿ ಮಾತ್ರ ಆಗಿದೆ, ನಾವೇಲ್ಲಾರು ಭಗವಂತನ ವಶದಲ್ಲಿದ್ದೇವೆ ಎಂದು ತಿಳಿಸುವ ಸಂಕೇತವಾಗಿ ನಾವುಗಳು ಕಾವಿಯನ್ನು ಧಾರಣೆ ಮಾಡುತ್ತೆವೆ, ಬ್ರಹ್ಮ ತತ್ವವನ್ನು ಹೊಂದಿ ಪಾಲಿಸುವವರು ಮಾತ್ರ ಭಾರತ ಭೂಮಿಯಲ್ಲಿ ಇರಲ್ಲು ಸಾಧ್ಯವಾಗುತ್ತದೆ. ಎಲ್ಲಿಯವರೆಗೂ ನಮ್ಮಲ್ಲಿ ನಾವೇಲರೂ ಹಿಂದೂಗಳು ನಾವೇಲ್ಲ ಒಂದೇ ಎನ್ನುವ ಭಾವನೆ ಮೂಡದೆ ಇದ್ದಲ್ಲಿ ಹಿಂದೂಗಳು ಗುಂಪು,ಗುಂಪಾಗಿ ಚದುರಿ ಹೋಗುತ್ತಾರೆ, ವಿಶೇಷ ಚೇತನನಾದ ಭಗವಂತನಿಂದ ಈ ಲೋಕ,ನಮ್ಮ ಬದುಕು ನಡೆಯುತ್ತದೆ ಜೀವನದಲ್ಲಿ ಶ್ರೇದ್ದೆ ಭಕ್ತಿ,ಧರ್ಮದಿಂದ ನಡೆದಲ್ಲಿ ಮಾತ್ರ ಭಗವಂತನ ದರ್ಶನ ಪ್ರಾಪ್ತಿಯಾಗುತ್ತದೆ. ವಿಶೇಷ ಚೇತನತ್ವ ಹೊಂದಿರುವ ಸೃಷ್ಟಿ ನಿಯಮಕನಾದ ಭಗವಂತನಲ್ಲಿ ಪ್ರತಿಯೊಬ್ಬರು ಶರಣದಾಗ ಮಾತ್ರ ಭಗವಂತನ ಸಾಮಿಪ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಹಾಶಿವಯೋಗಿಗಳ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಆರ್ಶಿವಚಾನ ನೀಡಿ ಈ ಭಾಗದಲ್ಲಿ ಗುರು,ವಿರಕ್ತಮಠಗಳು ಭಕ್ತರ ಉದ್ದಾರಕ್ಕಾಗಿ ಮಾರ್ಗದರ್ಶನವನ್ನು ಮಾಡುತ್ತಬಂದಿವೇ ಶ್ರೀರುದ್ರಮುನೀಶ್ವರ ಮಹಾಶಿವಯೋಗಿಗಳು ಈ ಕ್ಷೇತ್ರದಲ್ಲಿ ಅನುಷ್ಟಾನ ಗೈದು ಭಕ್ತರಿಗೆ ದರ್ಶನ,ಆರ್ಶಿವಾದ ನೀಡಿ ಅನೇಕ ಪವಾಡಗಳನ್ನು ಮಾಡಿದ ಪುಣ್ಯಭೂಮಿಯಲ್ಲಿ ಅವರ ಜಾತ್ರಮಹೋತ್ಸವ ಅಂಗವಾಗಿ ಲೋಕಕಲ್ಯಾಣದ ಉದ್ದೇಶದಿಂದ ಸಾದ್ಬವಾನ ಪಾದಯಾತ್ರೆಯನ್ನು ಹಮ್ಮಿಕೊಂಡು ಶ್ರೀ ಕ್ಷೇತ್ರದ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ಯ ದರ್ಶನವನ್ನು ಪಡೆದುಕೊಳ್ಳುವ ಉದ್ದೇಶದಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಹಾಶಿವಯೋಗಿಗಳ ೯೫ನೇ ಜಾತ್ರಮಹೋತ್ಸವ ಅಂಗವಾಗಿ ಚಿಕಲಪರ್ವಿಯಿಂದ ಮಾನ್ವಿಯ ಮಲ್ಲಯ್ಯನ ಬೆಟ್ಟದವರೆಗೂ ನಡೆದ ಸಾಧ್ಭವನ ಪಾದಯಾತ್ರೆಯನ್ನು ಮಾನ್ವಿಯ ಜಡೆಬಸಪ್ಪ ದೇವಸ್ಥಾನದ ಹತ್ತಿರ ಶಾಸಕ ಹಂಪಯ್ಯನಾಯಕ ಬರಮಾಡಿಕೊಂಡು ಪಾದಯಾತ್ರೆಯಲ್ಲಿ ಆಗಮಿಸಿದ ವಿವಿಧ ಮಠಗಳ ಶ್ರೀಗಳನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿಯ ಇಮ್ಮಡಿ ಶಾಂತಮಲ್ಲ ಮಹಾಸ್ವಾಮಿಗಳು,ಹರಳಹಳ್ಳಿಯ ಶರಣಬಸವ ದೇವರು,ಮೈಸೂರಿನ ನಿರಂಜನಸ್ವಾಮಿಗಳು, ಶಂಕರಯ್ಯಸ್ವಾಮಿ ಸುವರ್ಣಗಿರಿಮಠ, ದೇವಸ್ಥಾನದ ಅರ್ಚಕರಾದ ಮಲ್ಲಯ್ಯಸ್ವಾಮಿಗಳು,ಮುಖಂಡರಾದ ಮನ್ಸಾಲಿ ಯಂಕಯ್ಯಶೆಟ್ಟಿ,ಸಿದ್ದಲಿಂಗಪ್ಪ ವಕೀಲರು, ಹಾಗೂ ಮಾನ್ವಿ ಧರ್ಮವೇದಿಕೆಯ ಸದಸ್ಯರು,ಸೇರಿದಂತೆ ಸಾವಿರಾರು ಭಕ್ತರು ಇದ್ದರು.