
ನವದೆಹಲಿ,ಮಾ.೩೧- ಭಾರತೀಯ ಸೇನೆಗಾಗಿ ೯೧೦೦ ಕೋಟಿ ರೂಪಾಯಿ ಮೊತ್ತದ ಸುಧಾರಿತ ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ೧೨ ಶಸ್ತ್ರಾಸ್ತ್ರ ಸ್ಥಳ ಪತ್ತೆ ಡಬ್ಲ್ಯುಎಲ್ ಆರ್ ಸ್ವಾತಿ ಖರೀದಿಗೆ ಒಪ್ಪಂದಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಸಹಿ ಹಾಕಿದೆ.
ರಕ್ಷಣಾ ಸಚಿವಾಲಯದ ಪ್ರಕಟಣೆಯ ಪ್ರಕಾರ, ಸೇನಾ ರಕ್ಷಣಾ ವಲಯದ ಮೂರನೇ ಮತ್ತು ನಾಲ್ಕನೇ ರೆಜಿಮೆಂಟ್‌ಗಳಿಗೆ ಸುಧಾರಿತ ಆಕಾಶ್ ವೆಪನ್ ಸಿಸ್ಟಮ್ -ಎಡಬ್ಲ್ಯೂಎಸ್ ಖರೀದಿಯ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ತಿಳಿಸಿದೆ.
ಕ್ಷಿಪಣಿಗಳು ಮತ್ತು ಉಡಾವಣಾ ನವೀಕರಣಗಳು, ಗ್ರೌಂಡ್ ಸಪೋರ್ಟ್ ಉಪಕರಣಗಳು, ವಾಹನಗಳು ಮತ್ತು ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ. ೮,೧೬೦ ಕೋಟಿ ರೂ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.
ಎಡಬ್ಯುಎಸ್ ಸಣ್ಣ ವ್ಯಾಪ್ತಿಯ ಮೇಲ್ಮೈಯಿಂದ ವಾಯು ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಲಾಗಿದೆ
ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಉತ್ತಮ ಸಾಧನವಾಗಿವೆ. ಎರಡು ಹೆಚ್ಚುವರಿ ರೆಜಿಮೆಂಟ್‌ಗಳನ್ನು ಉನ್ನತೀಕರಣದೊಂದಿಗೆ ಉತ್ತರದ ಗಡಿಗಳಿಗಾಗಿ ಭಾರತೀಯ ಸೇನೆಗಾಗಿ ಸಂಗ್ರಹಿಸಲಾಗುತ್ತಿದೆ. ಸುಧಾರಿತ ಸೀಕರ್ ತಂತ್ರಜ್ಞಾನ, ಕಡಿಮೆ ಹೆಜ್ಜೆಗುರುತು, ೩೬೦ ಡಿಗ್ರಿ ಸಾಮರ್ಥ್ಯ ಮತ್ತು ಸುಧಾರಿತ ಪರಿಸರ ನಿಯತಾಂಕಗಳನ್ನು ಹೊಂದಿದೆ.
ಈ ಯೋಜನೆಯು ನಿರ್ದಿಷ್ಟವಾಗಿ ಭಾರತೀಯ ಕ್ಷಿಪಣಿ ತಯಾರಿಕಾ ಉದ್ಯಮಕ್ಕೆ ಮತ್ತು ಒಟ್ಟಾರೆಯಾಗಿ ಸ್ಥಳೀಯ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ. ಯೋಜನೆ ಒಟ್ಟಾರೆ ೮೨ ಪ್ರತಿಶತದಷ್ಟು ಸ್ಥಳೀಯ ವಿಷಯವನ್ನು ಹೊಂದಿದೆ, ಇದನ್ನು ೨೦೨೬-೨೭ ರ ವೇಳೆಗೆ ೯೩ ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಯೋಜನಾ ವೆಚ್ಚದ ಸುಮಾರು ೬೦ ಪ್ರತಿಶತವನ್ನು ಎಂಎಸ್‌ಎಂಇ ಸೇರಿದಂತೆ ಖಾಸಗಿ ಉದ್ಯಮಕ್ಕೆ ಶಸ್ತ್ರಾಸ್ತ್ರ ವ್ಯವಸ್ಥೆಯ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು, ದೊಡ್ಡ ಪ್ರಮಾಣದ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸಲು ನೀಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಮುಂದಿನ ೨೪ ತಿಂಗಳಲ್ಲಿ ಒಪ್ಪಂದ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯು ರಕ್ಷಣಾ ಉದ್ಯಮಕ್ಕೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ದೊಡ್ಡ ಅವಕಾಶವಾಗಿದೆ ಮತ್ತು ರಕ್ಷಣೆಯಲ್ಲಿ ’ಆತ್ಮನಿರ್ಭರತೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.