೯೧ನೇ ವಿತರಣಾ ನಾಲೆಯ ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳು ಮಿನಾಮೇಷ

ಎಲ್ಲಾ ನಾಲೆಗಳ ರಸ್ತೆ ನಿರ್ಮಾಣ ನಮ್ಮ ನಾಲೇ ಯಾಕೆ ನಿರ್ಮಾಣ ಇಲ್ಲಾ?
ಸಿರವಾರ.ಸೆ.೨೩-ತುಂಗಭದ್ರಾ ಎಡದಂಡೆ ನಾಲೆಯ ಮೇಲೆ ರೈತರು, ಅಧಿಕಾರಿಗಳು ಓಡಾಡಲು ಅನುಕೂಲವಾಗಲೆಂದು ಮೆಟ್ಲಿಂಗ್ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದ್ದರೂ ೯೧ ನೇ ವಿತರಣಾ ನಾಲೆಯ ರಸ್ತೆ ಯಾಕೆ ನಿರ್ಮಾಣ ಆಗುತ್ತಿಲ್ಲ, ಎಂಬುದು ರೈತರು, ಸಾರ್ವಜನಿಕರ ಪ್ರಶ್ನೆಯಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ನಾಲೆ, ಉಪನಾಲೆಯ ಸಿಂಧನೂರಿನಿಂದ ಹಿಡಿದು ಕೊನೆ ಭಾಗದವರೆಗೂ ಮೇಟ್ಲಿಂಗ ಕಾಮಗಾರಿಗೆ ಕೊ.ಗಟ್ಟಲೆ ಅನುದಾನ ಮಂಜೂರು ಆಗಿ, ಕಾಮಗಾರಿಯು ಪ್ರಗತಿಯಲ್ಲಿದೆ. ಸಿರವಾರ ಪಟ್ಟಣದ ಮಧ್ಯಭಾಗದಲ್ಲಿ ಹಾದುಹೊಗಿರುವ ೯೧ ನೇ ವಿತರಣಾ ನಾಲೆಯ ರಸ್ತೆಯ ಒಂದೇ ಒಂದು ಮಿಟರ್ ಸಹ ಮಾಡುತ್ತಿಲ್ಲ ಯಾಕೆ ಎಂಬುದು ಅಧಿಕಾರಿಗಳಿಂದಲೂ ಸ್ಪಷ್ಟ ಉತ್ತರ ಇಲ್ಲ.
ಈ ನಾಲೆಯು ಸಾವಿರಾರು ಹೆಕ್ಟೆರ್ ಪ್ರದೇಶ ನೀರು ಉಣಿಸುತ್ತದೆ, ಸಾವಿರಾರು ರೈತರು ಭೀಜ, ರಸಗೊಬ್ಬರ, ಕಾರ್ಮಿಕರನ್ನು ಕರೆದುಕೊಂಡು ಹೋಗಲು, ಬೇಳೆದ ಬೆಳೆಯನ್ನು ತರಲು ಈ ರಸ್ತೆಯನ್ನೆ ಅವಲಂಬಿಸಿದ್ದಾರೆ. ಮರಾಟ, ಮುರ್ಕಿಗುಡ್ಡ ಹಾಗೂ ತಾಂಡ, ಆಲ್ಕೊಡದಿಂದ ಸಿರವಾರಕ್ಕೆ ಸಂಪರ್ಕ ಕಲ್ಪಿಸಲು ಈ ರಸ್ತೆಯಿಂದ ತೆರೆಳಿದ ಸಮಿಪವಾಗುತ್ತದೆ. ಇಂತಹ ಮುಖ್ಯರಸ್ತೆಯನ್ನು ನಿರ್ಮಾಣ ಮಾಡದೆ ೯೨ ನೇ ವಿತರಣ ನಾಲೆಯ ಸಬ್ ಕಾಲುವೇಯನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ. ಈ ರಸ್ತೆ ಯಾಕೆ ಮಾಡುತ್ತಿಲ್ಲ ಎಂದು ಕೇಳಿದರೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಇಲ್ಲ.
ಈ ನಾಲೆಯು ಪಟ್ಟಣದಲ್ಲಿ ಹಾದು ಹೋಗಿರುವುದರಿಂದ, ಮರಾಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ನಿರ್ಮಾಣ ಮಾಡುತ್ತಿಲ್ಲ ಎಂಬ ಆರೋಪವು ಸಹ ಕೇಳಿ ಬರುತ್ತದೆ, ಪಟ್ಟಣ ಹೊರತು ಪಡಿಸಿ ಉಳಿದ ಕಡೆಯಲ್ಲಿಯಾದರೂ ನಿರ್ಮಾಣ ಮಾಡಬಹುದಲ, ಅದನ್ನು ಸಹ ಯಾಕೆ ನಿರ್ಮಾಣ ಮಾಡುತ್ತಿಲ್ಲ ಎಂದು ರೈತರ ಕೇಳುತ್ತಿದ್ದಾರೆ.
ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವಿಕಾರ ಮಾಡುತ್ತಿಲ್ಲ.
ಕೂಡಲೇ ೯೧ ನೇ ವಿತರಣಾ ನಾಲೆಯ ಮೇಲೆ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ, ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಮನವಿ ಮಾಡಿಕೊಂಡಿದ್ದಾರೆ. ನಿರ್ಲಕ್ಷ ಮಾಡಿದರೆ ನೀರಾವರಿ ಇಲಾಖೆ ಕಛೇರಿಯ ಮುಂಧೆ ಧರಣಿ ಮಾಡುವುದಾಗಿ ಹೇಳಿದ್ದಾರೆ.