೮ ಸಾವಿರ ಖಾಸಗಿ ಬಸ್ ಸಂಚಾರಕ್ಕೆ ಕ್ರಮ!


ಬೆಂಗಳೂರು, ಎ. ೭: ಸಾರಿಗೆ ಇಲಾಖೆ ಸಿಬ್ಬಂದಿಗಳ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ, ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಪರ್ಯಯವಾಗಿ ಖಾಸಗಿ ಪ್ರಯಾಣಿಕ ವಾಹನಗಳ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ.
ಸುಮಾರು ೮ ಸಾವಿರ ಬಸ್‌ಗಳ ಓಡಾಟಕ್ಕೆ ಸಜ್ಜುಗೊಳಿಸಲಾಗಿದೆ. ಆದರೆ ಹಲವೆಡೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವುದು ಕಂಡುಬಂದಿದೆ.
ಪ್ರಯಾಣಿಕರು ಹಾಗೂ ಬಸ್‌ಗಳಿಂದ ಸದಾ ಗಿಜಿ ಗುಡುತ್ತಿದ್ದ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳು, ಬುಧವಾರ ಬೆಳಿಗ್ಗೆ ಬಿಕೋ ಎನ್ನು
ತ್ತಿದ್ದವು. ಮುಷ್ಕರದ ಮಾಹಿತಿಯಿಲ್ಲದೆ ಆಗಮಿಸಿದ್ದ ಪ್ರಯಾಣಿಕರು ನಿಲ್ದಾಣಗಳಲ್ಲಿಯೇ ಬೀಡುಬಿಟ್ಟಿದ್ದು ಹಲವೆಡೆ ಕಂಡು ಬಂದಿತು. ಕೆಲವೆಡೆ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ, ಖಾಸಗಿ ಬಸ್‌ಗಳ ನಿಲುಗಡೆ ಮಾಡಲಾಗಿತ್ತು.
ಆದರೆ ಬೆಳಿಗ್ಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದುದು ಕಂಡುಬಂದಿತು. ಮುಷ್ಕರದ ಮಾಹಿತಿ ತಿಳಿದಿದ್ದ ಕೆಲ ಪ್ರಯಾಣಿಕರು ಸರ್ಕಾರಿ ಬಸ್‌ನಿಲ್ದಾಣಗಳತ್ತ ಬರುವ ಗೋಜಿಗೆ ಹೋಗಲಿಲ್ಲ.ರಾಜ್ಯಾದ್ಯಂತ ೯ ಸಾವಿರದಷ್ಟು ಸ್ಟೇಜ್ ಕ್ಯಾರಿಯರ್ ಖಾಸಗಿ ಬಸ್ ಗಳಿವೆ. ಇದರಲ್ಲಿ ೭ ಸಾವಿರ ಬಸ್ ಗಳು ಈಗಾಗಲೇ ಕಾಯರ್‌ಚರಿಸುತ್ತಿವೆ. ಇನ್ನುಳಿದ ೨ ಸಾವಿರ ಬಸ್ ಗಳನ್ನುಓಡಿಸಲಾಗುತ್ತಿದೆ.ಇದರ ಜೊತೆಗೆ ೧ ಸಾವಿರ ಖಾಸಗಿ ಬಸ್‌ಗಳ ಪ್ರಯಾಣಿಕರ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಹೇಳುತ್ತವೆ. ಖಾಸಗಿ ಬಸ್ ಆಪರೇಟರ್ ಗಳಿಗೆ ಒಂದು ತಿಂಗಳ ಕಾಲ ಕಾರ್ಯಾಚರಿಸಲು ಸರ್ಕಾರ ಅನುಮತಿನೀಡಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳ ಟ್ರಿಪ್ ಸಂಖ್ಯೆ ಹೆಚ್ಚಿಸಲಾಗಿದೆ.
ದುಪ್ಟಟ್ಟು ದರ: ನಿಗದಿತ ದರ ಮಾತ್ರ ಪಡೆಯಬೇಕು ಎಂದು ರಾಜ್ಯ ಸರ್ಕಾರ ಖಾಸಗಿ ಪ್ರಯಾಣಿಕ ವಾಹನಗಳಿಗೆ ಸೂಚಿಸಿದೆ. ಆದರೆ ಕೆಲವೆಡೆ ಖಾಸಗಿ ಬಸ್‌ಗಳು ದುಪ್ಪಟ್ಟು ದರಸಂಗ್ರಹಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ.