೮ ರಾಜ್ಯದಲ್ಲಿ ಸೋಂಕು ಅಧಿಕ: ಶೇ.೮೪.೬೧ ದಾಖಲು

Women wearing facemasks as a preventive measure against the COVID-19 coronavirus use their mobile phones outside a metro station in New Delhi on March 19, 2020. (Photo by Jewel SAMAD / AFP) (Photo by JEWEL SAMAD/AFP via Getty Images)


ನವದೆಹಲಿ, ಏ೧- ದೇಶದಲ್ಲಿ ಆರು ತಿಂಗಳ ಬಳಿಕ ಅತ್ಯಧಿಕ ದಾಖಲೆ ಪ್ರಮಾಣದಲ್ಲಿ ಕೊರೋನಾ ಸೋಂಕು ದೃಢ ಪಟ್ಟಿದ್ದು ಈ ಪೈಕಿ ಎಂಟು ರಾಜ್ಯಗಳಲ್ಲಿ ಶೇಕಡ ೮೪.೬೧ ರಷ್ಟು ಪ್ರಮಾಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಶೇಕಡಾ ೫೦ಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ತಗಲಿದೆ ಉಳಿದಂತೆ ಕರ್ನಾಟಕ-ಪಂಜಾಬ್ ಕೇರಳ ತಮಿಳುನಾಡು,ಗುಜರಾತ್, ಮದ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ ಸೋಂಕು ತಗಲಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೭೨,೩೩೦ ಮಂದಿಗೆ ಸೋಂಕು ತಗಲಿದೆ ಇತ್ತೀಚಿನ ದಿನಗಳಲ್ಲಿ ಇದು ದಾಖಲೆಯ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ.ಕಳೆದ ವರ್ಷ ಅಕ್ಟೋಬರ್ ೧೧ರಂದು ಕಾಣಿಸಿಕೊಂಡಿದ್ದ ಸೋಂಕು ಪ್ರಮಾಣ ಇದುವರೆಗಿನ ದಾಖಲೆಯಾಗಿತ್ತು. ಇಂದು ದಾಖಲೆ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ೩೯,೫೪೪, ಛತ್ತೀಸ್ ಗಡದಲ್ಲಿ೪,೫೬೩ ಮಂದಿಗೆ ಹಾಗು ಕರ್ನಾಟಕದಲ್ಲಿ೪,೨೨೫ ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಕ್ರಮವಾಗಿ ಮೊದಲ ಎರಡನೆಯ ಹಾಗು ತೃತೀಯ ಸ್ಥಾನದಲ್ಲಿದೆ.
ಮಹಾರಾಷ್ಟ್ರ ಒಂದರಲ್ಲಿ ಇಂದು ಬೆಳಗ್ಗೆ ೮ ಗಂಟೆ ತನಕ ೨೨೭ ಮಂದಿ ಸಾವನ್ನಪ್ಪಿದ್ದು ಇದುವರೆಗಿನ ಮಹಾರಾಷ್ಟ್ರದ ಇತಿಹಾಸದಲ್ಲಿ ದಾಖಲಾಗಿದೆ.ದೇಶದ ಎಂಟು ರಾಜ್ಯಗಳಲ್ಲಿ ಕೊರೊನಾ ಸೋಂಕು ಮತ್ತು ಸಕ್ರಿಯ ಪ್ರಕರಣ ಹೆಚ್ಚಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಇಂದಿನಿಂದ ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದ್ದು ನಲವತ್ತೈದು ವರ್ಷ ದಾಟಿದ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ