
ನವದೆಹಲಿ,ಫೆ.೨೧- ಭಯೋತ್ಪಾದನ ಚಟುವಟಿಕೆಗೆ ಹಣ ಪೂರೈಕೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯ್, ನಿರಾಜ್ ಭವಾನ ಹಾಗೂ ಇತರ ಸಹಚರರನ್ನು ಗುರಿಯಾಗಿಸಿರಿಸಿಕೊಂಡು ೧೦ ರಾಜ್ಯಗಳ ೭೦ ಕಡೆಗಳಲ್ಲಿ ಹಠಾತ್ ದಾಳಿ ಮಾಡಿ ಕೆಲವು ಗ್ಯಾಂಗ್‌ಸ್ಟರ್‌ಗಳನ್ನು ವಶಕ್ಕೆ ತೆಗೆದುಕೊಂಡಿದೆ.ನವದೆಹಲಿ-ಎನ್‌ಸಿಆರ್, ರಾಜಸ್ತಾನ, ಹರಿಯಾಣ, ಮಧ್ಯಪ್ರದೇಶ,ಗುಜರಾತ್, ಚಂಡಿಗಢ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಎನ್‌ಐಎ ತಂಡ ಇಂದು ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಬಗ್ಗೆ ದಾಖಲೆಗಳನ್ನು ಜಾಲಾಡಿದೆ ಎಂದು ಮೂಲಗಳು ತಿಳಿಸಿವೆ.ಪಂಜಾಬ್ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಸ್ಥಳಗಳ ಶೋಧನಾ ಕಾರ್ಯ ಮುಂದುವರೆದಿದೆ. ಉತ್ತರ ಭಾರತದಲ್ಲಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಲಾರೆನ್ಸ್ ಬಿಶ್ನೋಯ್ ಗ್ಯಾಂಗ್ ಗುರಿಯಾಗಿರಿಸಿಕೊಂಡು ದಾಳಿ ಮಾಡಲಾಗಿದೆ.೨೦೦೨ ರಲ್ಲಿ ಎನ್‌ಐಎ ಉತ್ತರ ರಾಜ್ಯಗಳಲ್ಲಿ ಅಪರಾಧ ಚಟುವಟಿಕೆ ಮತ್ತು ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕ್ರಿಮಿನಲ್ ಗ್ಯಾಂಗ್ ನಾಯಕರು ಮತ್ತು ಸದಸ್ಯರು ಕಾರ್ಯಾಚಾರಣೆ ನಡೆಸುತ್ತಿರುವ ಬಗ್ಗೆ ೨೦೦೨ ರಲ್ಲಿ ಎನ್‌ಐಎ ದೂರು ದಾಖಲಿಸಿತ್ತು.ಭಯೋತ್ಪಾದಕರ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್‌ಗಳು ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದಲ್ಲೂ ಶಾಮೀಲಾಗಿದ್ದರು. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳನ್ನು ಪೂರೈಕೆ ಮಾಡುವ ಜಾಲವನ್ನು ಹೊಂದಿದ್ದರು. ಕಾನೂನುಬಾಹಿರ ಶಸ್ತ್ರಾಸ್ತ್ರ ಪೂರೈಕೆ, ಶಸ್ತ್ರಾಸ್ತ್ರ ಉತ್ಪಾದಿಸಿ ಸರಬರಾಜು ಮತ್ತು ಸ್ಪೋಟಕ ಸಾಮಾಗ್ರಿಗಳನ್ನು ಕಳ್ಳ ಸಾಗಾಣಿಕೆ ಮಾಡುವ ಕಾರ್ಯದಲ್ಲೂ ಈ ಗ್ಯಾಂಗ್‌ಸ್ಟರ್‌ಗಳು ಶಾಮೀಲಾಗಿದ್ದರು.ಫೆಬ್ರವರಿ ೫ ರಂದು ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಸಾಂಧೂ ತಲೆಗೆ ೧೫ ಲಕ್ಷ ಬಹುಮಾನ ಪ್ರಕಟಿಸಿತ್ತು. ಅದೇ ರೀತಿ ಭಯೋತ್ಪಾದಕ ಲಕ್ಬೀರ್ ಸಿಂಧ್ ಸಾಂಧೂ ಅಲಿಯಾಸ್ ಲಾಂಡಾ ಪಂಜಾಬ್‌ನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಬೇಕಾಗಿದ್ದನೂ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಇತನ ಬಗ್ಗೆ ಮಾಹಿತಿ ನೀಡಿದವರಿಗೆ ೧೫ ಲಕ್ಷ ಬಹುಮಾನ ಪ್ರಕಟಿಸಲಾಗಿತ್ತು ಎಂದು ಎನ್‌ಐಎ ವಕ್ತಾರರು ಮಾಹಿತಿ ನೀಡಿದ್ದಾರೆ. ವಾರದ ಹಿಂದೆ ಸಿರ್ಸಾ ಮೂಲದ ಲಾಜಿಸ್ಟಿಕ್ ಪೂರೈಕೆದಾರ ಹಾಗೂ ಕುಖ್ಯಾತ ರೌಡಿಯೊಬ್ಬನನ್ನು ಶಸ್ತ್ರಾಸ್ತ್ರ ಪೂರೈಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಭಾರತ ಸೇರಿದಂತೆ ವಿದೇಶಗಳಲ್ಲೂ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಪಿತೂರಿ ನಡೆಸಿರುವ ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಐಎ ಪತ್ತೆ ಮಾಡಿದೆ. ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ ಬಳಿಕ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕಾರ್ಯಾಚಾರಣೆ ನಡೆಸುತ್ತಿರುವ ಭಯೋತ್ಪಾದಕ, ಕ್ರಿಮಿನಲ್ ಗ್ಯಾಂಗ್‌ಸ್ಟರ್‌ಗಳನ್ನು ಬೇರು ಸಮೇತ ಕಿತ್ತೋಗೆಯಲು ಎನ್‌ಐಎ ಹಲವು ಕಡೆಗಳಲ್ಲಿ ದಾಳಿ ಮಾಡಿದೆ.ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಬಾಂಬ್ ಸ್ಪೋಟ ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ತಮಿಳುನಾಡು, ಕರ್ನಾಟಕ,ಕೇರಳ,ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು.೨೦೨೨ರ ಅಕ್ಟೋಬರ್ ೨೩ ರಂದು ಕೊಯಮತ್ತೂರು ಹಾಗೂ ನವೆಂಬರ್ ೧೯ ರಂದು ಮಂಗಳೂರಿನಲ್ಲಿ ಬಾಂಬ್ ಸ್ಪೋಟ ಸಂಭವಿಸಿತ್ತು. ಈ ಎರಡು ಪ್ರಕರಣಗಳ ಹಿಂದೆ ಭಯೋತ್ಪಾದಕರ ಕೈವಾಡವಿರುವ ಸಾಬೀತಾದ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿತ್ತು.ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.