೮೮ ಕ್ಷೇತ್ರಗಳಲ್ಲೂ ಬಿರುಸಿನ ಮತದಾನ

ನವದೆಹಲಿ,ಏ.೨೬- ಉತ್ತರಾಧಿಕಾರ ತೆರಿಗೆ , ಮಂಗಳ ಸೂತ್ರ ಕಿತ್ತುಕೊಳ್ಳುವ ಹೇಳಿಕೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ನಡುವೆಯೇ ಕರ್ನಾಟಕ ಸೇರಿದಂತೆ ೧೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ೮೮ ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನಿಂದ ಮತದಾನ ಆರಂಭವಾಗಿದೆ.ಕೇರಳದ ಎಲ್ಲಾ ೨೦ ಲೋಕಸಭಾ ಕ್ಷೇತ್ರಗಳು, ಕರ್ನಾಟಕದ ೧೪, ರಾಜಸ್ಥಾನದ ೧೩, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ ೮, ಮಧ್ಯಪ್ರದೇಶದ ೭, ಅಸ್ಸಾಂ ಮತ್ತು ಬಿಹಾರದ ತಲಾ ೫, ಬಂಗಾಳ ಮತ್ತು ಛತ್ತೀಸ್‌ಗಢದ ತಲಾ ೩ ಸ್ಥಾನ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರದಲ್ಲಿ ತಲಾ ಒಂದು ಸ್ಥಾನಕ್ಕೆ ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ.ಈ ಹಂತದಲ್ಲಿ ನಿಗಧಿಯಾಗಿದ್ದ ೮೯ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ಬೇತುಲ್ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ನಿಧನದಿಂದ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಬೆತುಲ್ ಲೋಕಸಭಾ ಕ್ಷೇತ್ರದ ಮತದಾನ ಮರುನಿಗಧಿ ಮಾಡಲಿದ್ದು, ಮೇ ೭ ರಂದು ನಡೆಯಲಿದೆ. ಹೀಗಾಗಿ ಈ ಹಂತದಲ್ಲಿ ೮೮ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಮಧ್ಯಾಹ್ನದ ವೇಳೆ ಶೇಕಡಾ ೪೦ ರಿಂದ ೫೦ ರಷ್ಟು ಮತದಾನವಾಗಿದೆ.ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಕರ್ನಾಟಕ ಮತ್ತು ಕೇರಳ ನಿರ್ಣಾಯಕ ರಾಜ್ಯಗಳಾಗಿವೆ. ೨೦೧೯ ರಲ್ಲಿ, ಕರ್ನಾಟಕದ ೨೮ ಲೋಕಸಭಾ ಸ್ಥಾನಗಳಲ್ಲಿ ೨೫ ರಲ್ಲಿ ಬಿಜೆಪಿ ಗೆದ್ದಿತು, ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ.ದಕ್ಷಿಣ ಭಾರತದಲ್ಲಿ ಬಿಜೆಪಿಯು ಕೇರಳದ ಖಾತೆ ತೆರೆಯಲು ಪ್ರಯತ್ನಿಸಿದೆ. ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ವಿ ಮುರಳೀಧರನ್ ಅವರನ್ನು ಕಣಕ್ಕಿಳಿಸಿದೆ. ೨೦ ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ.ದಕ್ಷಿಣ ರಾಜ್ಯದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪರಸ್ಪರ ಪೈಪೊ?ಟಿ ನಡೆಸುತ್ತಿದ್ದರೂ ಸಹ, ಎರಡರಲ್ಲಿ ಗೆಲುವು ಸಾಧಿಸಿದರೆ ಅದು ವಿರೋಧ ಪಕ್ಷವಾದ ಇಂಡಿಯಾ ಮೈತ್ರಿಕೂಟದ ತಮ್ಮ ಸ್ಥಾನ ಹೆಚ್ಚಿಸಿಕೊಳ್ಳಲು ಮುಂದಾಗಿದೆಉಳಿದಂತೆ ಹಿಂದಿ ಹೃದಯ ಭಾಗದ ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಹೆಚ್ಚಿನ ಸ್ಥಾನ ಗೆಲ್ಲಲು ಪೈಪೋಟಿ ನಡೆದಿದೆ.ಮೂರನೇ ಹಂತದ ಚುನಾವಣೆ ಮೇ ೭ ರಂದು ನಡೆಯಲಿದೆ. ಎಲ್ಲಾ ಹಂತದ ಮತದಾನ ಮುಗಿದ ಬಳಿಕ ಜೂನ್ ೪ ರಂದು ಮತ ಎಣಿಕೆ ನಡೆ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಯನಾಡು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಉಳಿದಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿರುವನಂತಪುರದಲ್ಲಿ ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಕಣಕ್ಕಿಳಿದಿದ್ದಾರೆ.ಎಚ್.ಡಿ ಕುಮಾರ್ ಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಾಲಿವುಡ್ ಕಲಾವಿದರಾದ ಹೇಮಾ ಮಾಲಿನಿ ಮತ್ತು ಅರುಣ್ ಗೋವಿಲ್, ತೇಜಸ್ವಿ ಸೂರ್ಯ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ,, ಕೆಸಿ ವೇಣುಗೋಪಾಲ್, ಭೂಪೇಶ್ ಭಘೇಲ್. ಮತ್ತು ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ತಮ್ಮ ರಾಜಕೀಯ ಭವಿಷ್ಯವನ್ನು ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ