೮೫ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ

ರಾಯಚೂರು.ಆ.೦೬-ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದ ೮೫ನೇ ದಿನವಾದ ಇಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ರವಿ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಮಂತ್ರಿ ಇವರ ನೇತೃತ್ವದಲ್ಲಿ ನೂರಾರು ರೈತರು ಹೋರಾಟವನ್ನು ಬೆಂಬಲಿಸಿ ಭಾಗವಹಿಸಿದ್ದರು .ಜಿಲ್ಲಾ ಅಧ್ಯಕ್ಷರಾದ ರವಿ ಪಾಟೀಲ್ ರವರು ಮಾತನಾಡುತ್ತಾ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವವರೆಗೂ ನಮ್ಮ ರೈತ ಸಂಘದ ಬೆಂಬಲ ಇರುತ್ತದೆ ಸರಕಾರ ಕೂಡಲೇ ಗಂಭೀರವಾಗಿ ಈ ಹೋರಾಟವನ್ನು ಪರಿಗಣಿಸಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು .ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಮಂತ್ರಿಯವರು ಮಾತನಾಡುತ್ತಾ ಇಂದು ವರಮಹಾಲಕ್ಷ್ಮಿ ಹಬ್ಬ ಆದರೆ ನಾವು ಇಂದು ದುರ್ಗೆಯಾಗಿ ನಾವೆಲ್ಲರೂ ಏಮ್ಸ್ ಹೋರಾಟ ಸಮಿತಿಗೆ ಬೆಂಬಲ ನೀಡಲು ಬಂದಿದ್ದೇವೆ ,ಎಲ್ಲಿಯವರೆಗೆ ಏಮ್ಸ್ ಸ್ಥಾಪನೆ ಆಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಘೋಷಿಸಿದರು .
ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ಅವರು ಮಾತನಾಡುತ್ತಾ ಇಡೀ ಕರ್ನಾಟಕದ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆ ಸಂಪೂರ್ಣ ಹಿಂದುಳಿದಿದೆ ಈ ಮೊದಲು ಐಐಟಿ ಯಿಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಆಗಲೇಬೇಕು , ಇದಕ್ಕಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧರಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಆಡಿ.ಬಸವರಾಜ ಕಳಸ, ಎಸ್ ಮಾರೆಪ್ಪ ವಕೀಲರು, ಎಂ. ಆರ್ ಭೇರಿ, ಕಾಮ್ ರಾಜ್ ಪಾಟೀಲ್, ರಾಮ್ ಕಿಶೋರ್ ತಿವಾರಿ, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.