೮ನೇ ಹಂತದ ಮತದಾನದಲ್ಲಿ ಬಿಜೆಪಿಗೆ ಮೂರು ಪಟ್ಟು ಮತ

ನವದೆಹಲಿ,ಏ,೨೯- ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ಪಕ್ಕಕ್ಕಿಟ್ಟು ಪಶ್ಚಿಮ ಬಂಗಾಳ ವಿಧಾಸಸಭೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ ಬಿಜೆಪಿಗೆ ಅಂತಿಮ ಹಂತದ ಮತದಾನದಲ್ಲಿ ಮೂರು ಪಟ್ಟು ಮತಗಳು ಹೆಚ್ಚಿಗೆ ಬರುವ ನೀರೀಕ್ಷೆ ಮಾಡಲಾಗಿದೆ.
ಇದರಿಂದಾಗಿ ಆಢಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಎಡಪಕ್ಷಗಳ ಮಿತ್ರಕೂಟಕ್ಕೆ ಆತಂಕ ಸೃಷ್ಟಿಯಾಗಿದೆ.
ಇಂದು ೮ನೇ ಮತ್ತು ಕೊನೆಯ ಹಂತದ ಮತದಾನ ಸಾಗಿದ್ದು ಬಿಜೆಪಿಗೆ ಮೂರು ಪಟ್ಟು ಜನಾಭಿಪ್ರಾಯ ವ್ಯಕ್ತವಾಗಿದೆ. ಸೋಂಕು ಮತ್ತು ಸಾವಿನ ಕಡೆ ಗಮನ ಕೊಡದೆ ಬಿಜೆಪಿ ಮತ್ತು ಅದರ ನಾಯಕರು ಪಶ್ಚಿಮ ಬಂಗಾಳದಲ್ಲಿ ಸೋಂಕು ಹೆಚ್ಚಳ ಲೆಕ್ಕಿಸದೆ ಪ್ರಚಾರ ಮಾಡಿದುದ್ದು ಬಿಜೆಪಿಗೆ ಹೆಚ್ಚಿನ ಮತಗಳು ಬರಲು ಸಹಕಾರಿಯಾಗಲಿದೆ ಎನ್ನಲಾಗಿದೆ.
ಕೊನೆಯ ಹಂತದಲ್ಲಿ ೩೫ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.ಚುನಾವಣೆ ನಡೆಯುವ ೩೫ ಕ್ಷೇತ್ರಗಳ ಪೈಕಿ ಬಿಜೆಪಿ ೧ ಸ್ಥಾನದಲ್ಲಿ ಮಾತ್ರ ೨೦೧೬ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಕಳೆದ ಬಾರಿ ಕೇವಲ ಶೇ.೧೧.೪೮ ರಷ್ಟು ಶೇಕಡಾವಾರು ಮತ ಪಡೆದಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.೩೦.೭೭ ರಷ್ಟು ಮತ ಪಡೆದಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿ ಪಡೆದಿದದ್ ಶೇಕಡಾವಾರು ಮತಗಳಿಗಿಂತ ಮೂರು ಪಟ್ಟು ಮತ ಪಡೆಯಲಿದೆ ಎಂದು ಅಂದಾಜು ಮಾಡಲಾಗಿದೆ.
ಈ ಹಂತದಲ್ಲಿ ನಡೆಯಲಿರುವ ೩೫ ಕ್ಷೇತ್ರಗಳ ಚುನಾವಣೆ ಪೈಕಿ ಕಳೆದ ಬಾರಿ ಟಿಎಂಸಿ ೧೭, ಕಾಂಗ್ರೆಸ್ ೧೩- ಎಡ ಪಕ್ಷಗಳು ೩, ಪಕ್ಷೇತರರು ಇತರೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅದರ ಚಿತ್ರಣ ಬದಲಾಗಿದೆ.
ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.೧೯.೪೫ ಮತ್ತು ಎಡಪಕ್ಷಗಳು ಶೇ.೫.೧೫ ರಷ್ಟು, ಶೇಕಡವಾರು ಮತ ಪಡೆದಿದ್ದವು.