
ಕೋಲಾರ,ಆ,೧೭- ಮುಂಬರುವ ದಿನಗಳಲ್ಲಿ ಕೃಷಿ, ಉದ್ಯಮ, ಪ್ರವಾಸೋದ್ಯಮ, ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ಕೋಲಾರವನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ದಿ ಮತ್ತು ನಗರ ಯೋಜನೆ ಖಾತೆ ಸಚಿವ ಬಿ.ಎಸ್. ಸುರೇಶ್ ಭರವಸೆ ನೀಡಿದರು,
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶವನ್ನು ನೀಡಿದರು.
ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಜಿಡಿಪಿ ಹೆಚ್ಚುತ್ತಿದೆ. ಸಾಮನ್ಯ ಜನರ ಮುಖದಲ್ಲಿ ಮಂದಹಾಸ ಕಾಣಲಾಗುತ್ತಿದೆ. ಹತ್ತು ಹಲವು ಅಭಿವೃದ್ದಿ ಪರ ಯೋಜನೆಗಳಿಂದ ಕೋಲಾರವು ಜನಪರ ಯೋಜನೆಗಳಿಂದ ಅಭಿವೃದ್ದಿ ಪಥದತ್ತ ದಾಪುಗಾಲು ಹಾಕುತ್ತಿದೆ ಎಂದರು.
ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ವಶದಲ್ಲಿರುವ ೯೦೦ ಎಕರೆ ಜಮೀನಿನಲ್ಲಿ ಟಾನ್‌ಶಿಫ್ ನಿರ್ಮಾಣ ಮಾಡಲಾಗುವುದು. ಯರ್‌ಗೋಳ್ ಜಲಷಾಯದ ಕುಡಿಯುವ ನೀರನ್ನು ಜಿಲ್ಲೆಯ ೩ ತಾಲ್ಲೂಕುಗಳಿಗೆ ಹರಿಸುವ ಯೋಜನೆ ಈಗಾಗಲೇ ಪ್ರಾಯೋಗಿಕ ಹಂತದಲ್ಲಿದೆ. ಸೆಪ್ಟೆಂಬರ್ ಮಾಸಾಂತ್ಯದಲ್ಲಿ
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಪಥಸಂಚಾಲನದಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ೩ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು, ಕೆ.ಎಸ್.ಆರ್.ಟಿ.ಸಿ.ನಿಗಮದ ಸಿಬ್ಬಂದಿಗಳಿಗೆ ೧೦ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳಿಂದ ವಿತರಿಸಲಾಯಿತು.
ಪ್ರಶಸ್ತಿ ಪುರಸ್ಕೃತರು-

ಕು.ಧರಣಿ, ಕೀರ್ತನ ಪಾಂಡ್ಯನ್, ಖುಡ್ಸಿಯ ನಸ್ಸೀರ್, ನಾಗೇಶ್, ಎಂ.ಎಸ್.ಕೌಶಿಕ್, ರವಿಶಂಕರ್, ಎಂ.ಎನ್. ಇವರ ಜೂತೆಗೆ ಅಂಗಾಂಗ ಕೊಯ್ಲೂ ಮಾಡಲು ಶ್ರಮಿಸಿದ ವೈದ್ಯರ ತಂಡಕ್ಕೆ ಹಾಗೂ ದಾನಿಯ ಮಾತೃಶ್ರೀಯವರಿಗೆ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಎಲ್ಲಾ ಪುರಸ್ಕೃತರು ಉಪಸ್ಥಿತರಿದ್ದರು,
ವೇದಿಕೆಯಲ್ಲಿ ಶಾಸಕ ಡಾ.ಕೆ.ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು, ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ಜಿಲ್ಲಾ ಪಂಚಾಯತ್ ಸಿ.ಇ.ಓ. ಪದ್ಮಾಬಸವಂತಪ್ಪ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಎ.ಡಿ.ಸಿ.ಶಂಕರ್ ವಡ್ಯಾಳ್,ತಹಸೀಲ್ದಾರ್ ಹರ್ಷವರ್ಧನ್ ಎ.ಎಸ್.ಪಿ. ಭಾಸ್ಕರ್, ಡಿ.ವೈ.ಎಸ್.ಪಿ. ಮಲ್ಲೇಶ್ ಉಪಸ್ಥಿತರಿದ್ದರು,