೭೬/೫ ಕಾಲುವೆಗೆ ನೀರು ಹರಿಸಲು ರೈತರು ಆಗ್ರಹ

ರಾಯಚೂರು.ಅ.೨೦- ಕಾಲುವೆ ನಂ, ೭೬/೫ ಡಿಸ್ಟ್ರಿಬ್ಯೂಟರ್ ವ್ಯಾಪ್ತಿಯಲ್ಲಿ ಬೆಳೆದ ಜೋಳದ ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳಿಗೆ ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಾಲುವೆ ಸಂಖ್ಯೆ ೭೬/೫ ರ ವ್ಯಾಪ್ತಿಗೆ ಬರುವ ಸುಮಾರು ೬ ಗ್ರಾಮಗಳು ಸೇರಿದ್ದು, ಜಿನೂರು ಕ್ಯಾಂಪ್, ಜಿನೂರು, ಖೋತಾಳ, ಮುದ್ರಂಗುಡ್ಡಿ, ಈರಲಗಡ್ಡೆ, ಖಾರಬದಿಸಿ, ಈ ಗ್ರಾಮಗಳ ರೈತರು ಜೋಳವನ್ನು ಬೆಳೆದಿದ್ದು, ಮುಂಗಾರು ವೈಫಲ್ಯದಿಂದ ಜೋಳದ ಬೆಳೆ ಒಣಗಿತ್ತಿದೆ ಎಂದು ದೂರಿದರು.
ಕಾಲುವೆಯ ಮೇಲೆ ಅವಲಂಬಿತರಾದ ರೈತರು ಲಕ್ಷಂತಾರ ರೂಪಾಯಿ ಖರ್ಚು ಮಾಡಿದ್ದು, ಈಗ ಮುಂಗಾರು ವೈಫಲ್ಯದಿಂದ ಬೆಳೆ ನಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ರೈತರು ತಮ್ಮ ಜಮೀನುಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಬಹುದು ಮತ್ತು ರೈತರ ಸಂಕಷ್ಟಕ್ಕೆ ತಲುಪುವ ಹಾಗೂ ಗೂಳೆ ಹೋಗುವ ಹಂತಕ್ಕೆ ತಲುಪಿರುತ್ತದೆ. ಕಾರಣ ತಾವುಗಳು ಸದರಿ ಮೇಲ್ಕಾಣಿಸಿದ ಕಾಲುವೆಗೆ ಈ ವರೆಗೂ ನೀರು ತಲಪಿಸಿರುವುದಿಲ್ಲ ಆದ ಕಾರಣ ಅವು ತೀವ್ರವಾಗಿ ಕಾಲುವೆಗೆ ನೀರನ್ನು ಪೂರೈಸಿ ರೈತರು ಬೆಳೆದ ಬೆಳಗಳನ್ನು ರಕ್ಷಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಊರಿನ ರೈತರು ಇದ್ದರು.