೭೦.೦೦೦ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ

ನವದೆಹಲಿ,ಜು.೨೨- ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪವನ್ನು ಜನರು ತೆಗೆದುಕೊಂಡಿದ್ದಾರೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ೨೫ ವರ್ಷಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.
‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸರ್ಕಾರಿ ನೌಕರರ ಪಾತ್ರ ಅತ್ಯಂತ ಹಿರಿದು. ಸರ್ಕಾರಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.ದೇಶದ ೪೪ ಸ್ಥಳಗಳಲ್ಲಿ ಏಕಕಾಲಕ್ಕೆ ಹಮ್ಮಿಕೊಂಡಿದ್ದ ರೋಜ್‌ಗಾರ್ ಮೇಳದ ಅಡಿಯಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಯಾದ ೭೦,೦೦೦ ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿ ಅವರು ಮಾತನಾಡಿದರು.ಭಾರತವನ್ನು ಇಂದು ಬ್ಯಾಂಕಿಂಗ್ ಕ್ಷೇತ್ರವನ್ನು ಬಲಿಷ್ಠವೆಂದು ಪರಿಗಣಿಸಿರುವ ವಿಶ್ವದ ಇತರೆ ದೇಶಗಳಲ್ಲಿ ಒಂದಾಗಿದೆ. ಕಳೆದ ೯ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ, ಹಿಂದಿನ ಸರ್ಕಾರದ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ನಾಶ ಮಾಡಿದ್ದರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್‌ಗಳ ಪುನರುಜ್ಜೀವನ:
’ಫೋನ್ ಬ್ಯಾಂಕಿಂಗ್ ಹಗರಣ’ದಿಂದಾಗಿ ಬ್ಯಾಂಕಿಂಗ್ ಕ್ಷೇತ್ರದ ಬೆನ್ನೆಲುಬು ಮುರಿದುಹೋಯಿತು. ೨೦೧೪ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ ಬ್ಯಾಂಕಿಂಗ್ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಿದ್ದೇವೆ. ದೇಶದಲ್ಲಿ ಸರ್ಕಾರಿ ಬ್ಯಾಂಕ್‌ಗಳ ನಿರ್ವಹಣೆ ಬಲಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.ಹಲವಾರು ಸಣ್ಣ ಬ್ಯಾಂಕ್‌ಗಳನ್ನು ಒಟ್ಟುಗೂಡಿಸಿ ದೊಡ್ಡ ಬ್ಯಾಂಕ್‌ಗಳನ್ನು ರಚಿಸಿದ್ದೇವೆ. ಈ ಮೂಲಕ ಕೇಂದ್ರ ಸರ್ಕಾರ ’ದಿವಾಳಿ ಸಂಹಿತೆ’ ಕಾನೂನು ಜಾರಿ ಮಾಡಿದೆ ಇದರಿಂದ ಯಾವುದೇ ಬ್ಯಾಂಕ್ ಮುಚ್ಚಿದರೆ ಅವುಗಳಿಗೆ ಕನಿಷ್ಠ ನಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ.ಡಿಜಿಟಲ್ ವಹಿವಾಟು ಮಾಡಲು ಸಮರ್ಥರಾಗಿದ್ದೇವೆ ಆದರೆ ೯ ವರ್ಷಗಳ ಹಿಂದೆ ೧೪೦ ಕೋಟಿ ಜನರಿಗೆ ಫೊ?ನ್ ಬ್ಯಾಂಕಿಂಗ್ ಇರಲಿಲ್ಲ. ಈಗ ಡಿಜಿಟಲ್ ವಹಿವಾಟಿನ ಮೂಲಕ ಹಣಕಾಸು ವ್ಯವಸ್ಥೆ ನಿರ್ವಹಣೆ ಮಾಡುವಂತಾಗಿದೆ ಎಂದು ಹೇಳಿದ್ದಾರೆ
ಮೂರನೇ ಸ್ಥಾನಕ್ಕೆ ಭಾರತ
“ಕೇವಲ ಒಂಬತ್ತು ವರ್ಷಗಳಲ್ಲಿ ೧೦ ನೇ ಸ್ಥಾನದಿಂದ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ತಜ್ಞರು ಹೇಳುವ ಪ್ರಕಾರ ಮುಂದಿನ ಕೆಲವು ವರ್ಷಗಳಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಸೇರಲಿದೆ. ದೇಶದ ಅಸಾಮಾನ್ಯ ಸಾಧನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಜಾಗತಿಕ ನಂಬಿಕೆ, ಭಾರತದ ಆಕರ್ಷಣೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ’ ಎಂದು ಹೊಸದಾಗಿ ಸರ್ಕಾರಿ ಕೆಸಲಕ್ಕೆ ನೇಮಕವಾದರಿಗೆ ಕಿವಿ ಮಾತುಹೇಳಿದ್ದಾರೆ.