೭೫ ರ ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಥ್ರೋ-ಬಾಲ್ ಪಂದ್ಯಾವಳಿ

ರಾಯಚೂರು,ಆ.೦೨- ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಕಾಲೇಜುಗಳಾದ ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯ, ಎಲ್.ವಿ.ಡಿ. ಮಹಾವಿದ್ಯಾಲಯ, ಬಿ.ಆರ್.ಬಿ ಮಹಾವಿದ್ಯಾಲಯ, ಎಸ್.ಆರ್,ಪಿ.ಎಸ್. ಪದವಿ ಪೂರ್ವ ಕಾಲೇಜು, ಹಮದರ್ದ್ ಪದವಿ ಪೂರ್ವ ಕಾಲೇಜು, ಸಿ.ಎಮ್.ಎನ್ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಹಮದರ್ದ್ ಹೈಸ್ಕೂಲ್ ಮಹಿಳಾ ಬೋಧಕರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಧಿನಿಯರಿಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಕ್ರೀಡಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ೭೫ ರ ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ ೦೧-೦೮-೨೦೨೨ ರಂದು ಥ್ರೋ-ಬಾಲ್ ಪಂದ್ಯಾವಳಿಯನ್ನು ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಎಲ್.ವಿ.ಡಿ. ಮಹಾವಿದ್ಯಾಲಯ ಮತ್ತು ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯದ ತಂಡಗಳು ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿ ಈ ಎರಡು ತಂಡಗಳ ಸೆಣಸಾಟದಲ್ಲಿ ಎಲ್.ವಿ.ಡಿ. ಮಹಾವಿದ್ಯಾಲಯ ಎದುರಾಳಿ ತಂಡ ಎಸ್.ಎಸ್.ಆರ್.ಜಿ. ಮಹಿಳಾ ಮಹಾವಿದ್ಯಾಲಯವನ್ನು ಮಣಿಸಿ ಉತ್ತಮ ಪ್ರದರ್ಶನದೊಂದಿಗೆ ಎಲ್.ವಿ.ಡಿ. ಮಹಾವಿದ್ಯಾಲಯ ತಂಡ ಪ್ರಥಮ ಸ್ಥಾನ ಪಡೆದು ತನ್ನ ಮುಡಿಗೇರಿಸಿಕೊಂಡಿತು. ತಂಡದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ೧) ಪ್ರೀತಿ ತಂಡದ ನಾಯಕಿ ೨) ಸನಾ ೩) ವಿಜಯಲಕ್ಷ್ಮೀ ೪) ಸಿಂಧೂ ೫) ಉಸ್ಮಿತಾ ೬) ಶ್ರಾವಣಿ ೭) ಚನ್ನಬಸ್ಸಮ್ಮ ೮) ಐಶ್ವರ್ಯ ಹೆಚ್.ಎಂ. ೯) ತೇಜಸ್ವಿನಿ ೧೦) ರೇಣುಕಾ ಆರ್, ೧೧) ರೇಣುಕಾ ಮತ್ತು ೧೨) ಖುಷಿ ಜೈನ್ ಇವರೆಲ್ಲರಿಗೂ ಎಲ್.ವಿ.ಡಿ. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್‌ಮನ್‌ರಾದ ಶ್ರೀ. ಪವನ್ ಸುಖಾಣಿ, ಕಾರ್ಯದರ್ಶಿಗಳಾದ ಶ್ರೀ. ದವಲ್ ಜೋಬನಪುತ್ರ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ವೆಂಕಟೇಶ ಬಿ. ದೇವರು, ಗಣಿತ ವಿಭಾಗದ ಪ್ರಾಧ್ಯಾಪಕರಾದ ಶ್ರೀ. ಹುಸೇನಪ್ಪ, ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಕೃಷ್ಣ ನಾಯಕ ದೈಹಿಕ ನಿರ್ದೇಶಕರಾದ ಶ್ರೀ. ವೀರೇಶ ನಾಯಕ, ಕಾಲೇಜಿನ ಅಧೀಕ್ಷರಾದ ಶ್ರೀ. ರಾಘವೇಂದ್ರ ಕುಲಕರ್ಣಿ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿನಿಯರಿಗೆ ಅಭಿನಂದನೆ ಸೂಚಿಸಿ ಶುಭ ಕೋರಿದ್ದಾರೆ.