೭೪ ವರ್ಷದ ರಣಧೀರ್ ಕಪೂರ್ ಆಸ್ಪತ್ರೆಗೆ: ಸಹೋದರ ರಾಜೀವ್ ರ ಪ್ರಾಪರ್ಟಿ ವಿವಾದದಿಂದ ಚರ್ಚೆಯಲ್ಲಿದೆ ಕಪೂರ್ ಪರಿವಾರ!

ಬಾಲಿವುಡ್ ನ ಹಿರಿಯ ನಟ ರಣಧೀರ್ ಕಪೂರ್ ಅವರನ್ನು ಕೋಕಿಲಾಬೆನ್ ಹಾಸ್ಪಿಟಲ್ ಗೆ ಭರ್ತಿಗೊಳಿಸಲಾಗಿದೆ. ೭೪ ವರ್ಷದ ರಣಧೀರ್ ಕಪೂರ್ ಅವರು ಕೊರೋನಾ ವೈರಸ್ಸಿನ ಸೋಂಕಿಗೆ ಒಳಗಾಗಿದ್ದಾರೆ.
ಇನ್ನೊಂದೆಡೆ ಕಪೂರ್ ಪರಿವಾರವು ಈ ಸಮಯ ದಿವಂಗತ ರಾಜೀವ್ ಕಪೂರ್ (ರಣಧೀರ್ ಅವರ ಕಿರಿಯ ತಮ್ಮ) ಪ್ರಾಪರ್ಟಿ ವಿವಾದವನ್ನು ಮುಂದಿಟ್ಟು ಚರ್ಚೆಯಲ್ಲಿದೆ. ರಾಜೀವ್ ಅವರಿಗೆ ಯಾವುದೇ ಸಂತಾನ ಇಲ್ಲದಿರುವ ಕಾರಣ ಅವರ ಆಸ್ತಿಯ ವಿಷಯವು ಕೋರ್ಟ್ ಮೆಟ್ಟಲು ಹತ್ತಿದೆ.
ಬಾಂಬೆ ಹೈಕೋರ್ಟ್ ರಣಧೀರ್ ಕಪೂರ್ ಮತ್ತು ಸಹೋದರಿ ರೀಮಾ ಜೈನ್ ರಿಂದ ಅಂಡರ್ಟೇಕಿಂಗ್ ಕೇಳಿದೆ.ಅದರಲ್ಲಿ ರಾಜೀವ್ ಅವರ ಡೈವೋರ್ಸ್ ಡಿಕ್ರೀ ಹುಡುಕಿ ಪ್ರಸ್ತುತ ಪಡಿಸಲು ಸೂಚಿಸಿದೆ.
ರಣಧೀರ್ ಕಪೂರ್ ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಅವರ ತಂದೆ. ರಣಧೀರ್ ಬಾಲಿವುಡ್ ನಟಿ ಬಬಿತಾ ಅವರನ್ನು ೧೯೭೧ ರಲ್ಲಿ ವಿವಾಹವಾಗಿದ್ದರು. ಆದರೆ ಇವರಿಬ್ಬರ ಸಂಸಾರ ಜೊತೆಯಾಗಿ ಮುಂದುವರಿಯಲಿಲ್ಲ. ಇಬ್ಬರೂ ಬೇರೆಬೇರೆಯಾಗಿ ವಾಸ ಮಾಡತೊಡಗಿದರು. ಆದರೆ ಅವರು ತಲಾಕ್ ಪಡೆಯಲಿಲ್ಲ. ರಣಧೀರ್ ಕಪೂರ್ ಮತ್ತು ಬಬಿತಾ ತಮ್ಮ ಮಕ್ಕಳ ಪಾಲನೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಪೂರ್ಣ ರೂಪದಿಂದ ಸಹಾಯವನ್ನು ನೀಡಿದ್ದರು.
೧೫ ಫೆಬ್ರವರಿ ೧೯೪೭ ರಂದು ಜನಿಸಿದ ರಣಧೀರ್ ಕಪೂರ್ ಅವರು ಫಿಲ್ಮ್ ಶ್ರೀ೪೨೦(೧೯೫೫) ನಲ್ಲಿ ಬಾಲನಟನಾಗಿ ಫಿಲ್ಮ್ ಪ್ರಪಂಚಕ್ಕೆ ಕಾಲಿಟ್ಟಿದ್ದರು. ರಾಂಪುರ್ ಕಾ ಲಕ್ಷ್ಮಣ್, ಚಾಚಾ ಭತೀಜಾ… ಇವೆಲ್ಲ ಫಿಲ್ಮುಗಳು ಇಂದಿಗೂ ರಣಧೀರ್ ಕಪೂರ್ ಅವರ ಅಭಿನಯವನ್ನು ನೆನಪಿಸುತ್ತದೆ.
ಕಳೆದ ೧೬ ತಿಂಗಳಲ್ಲಿ ಶೋಮೆನ್ ಖ್ಯಾತಿಯ ದಿಗ್ಗಜ ನಟ ರಾಜಕಪೂರ್ ಸಾಹೇಬರ ಐವರು ಮಕ್ಕಳಲ್ಲಿ ಮೂವರು ಮಕ್ಕಳು ನಿಧನರಾಗಿದ್ದಾರೆ .ಮೂವರು ಸಹೋದರರಲ್ಲಿ ರಣಧೀರ್ ಕಪೂರ್ ಮಾತ್ರ ಬದುಕಿದ್ದಾರೆ. ಕಳೆದ ಏಪ್ರಿಲ್ ೩೦ ,೨೦೨೦ ರಂದು ಅವರ ಸಹೋದರ ರಿಷಿ ಕಪೂರ್ ನಿಧನರಾಗಿದ್ದರು. ೯ ಫೆಬ್ರವರಿ ೨೦೨೧ರಂದು ಹೃದಯಾಘಾತದಿಂದ ಕಿರಿಯ ಸಹೋದರ ರಾಜೀವ್ ಕಪೂರ್ ನಿಧನರಾಗಿದ್ದರು.ಸಹೋದರಿಯರಲ್ಲಿ ರೀಮಾ ಜೈನ್ ಬದುಕಿದ್ದಾರೆ. ಇನ್ನೋರ್ವ ಸಹೋದರಿ ರೀತೂ ನಂದಾ ೧೪ ಜನವರಿ ೨೦೨೦ರಂದು ನಿಧನರಾಗಿದ್ದಾರೆ. ಅವರು ಕ್ಯಾನ್ಸರ್ ಪೀಡಿತರಾಗಿದ್ದರು. ಇದೀಗ ಸೋದರ ರಾಜೀವ್ ಅವರ ಆಸ್ತಿಪಾಸ್ತಿಯ ಕುರಿತಂತೆ ಹಕ್ಕುದಾರರ ನಡುವೆ ವಿವಾದ ಸೃಷ್ಟಿಯಾಗಿದೆ.

ರಾಖೀ ಸಾವಂತ್ ರಿಂದ ಕಂಗನಾ ರನಾವತ್ ರಿಗೆ ಸಲಹೆ: “ನಿಮ್ಮ ಬಳಿ ಕೋಟಿಗಟ್ಟಲೆ ರೂಪಾಯಿ ಇದೆ. ದೇಶಸೇವೆ ಮಾಡಿ, ಆಕ್ಸಿಜನ್ ಖರೀದಿಸಿ ಅಗತ್ಯವಿರುವ ಜನರಿಗೆ ನೀಡಿ”

ಇಂದು ಕೊರೊನಾದ ಎರಡನೇ ಅಲೆ ದೇಶಾದ್ಯಂತ ಹಾಹಾಕಾರ ಎಬ್ಬಿಸಿದೆ .ಪ್ರತೀದಿನ ಹೊಸ ಹೊಸ ರೋಗಿಗಳ ಸಂಖ್ಯೆ ಏರುತ್ತಿದೆ, ಸಾವಿನ ಸಂಖ್ಯೆಯೂ ಏರುತ್ತಿದೆ. ದೇಶದ ಆರೋಗ್ಯ ಸಮಸ್ಯೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ರೋಗಿಗಳಿಗೆ ಆಕ್ಸಿಜನ್ ಔಷಧಿಗಳು ಸರಿಯಾದ ರೀತಿಯಲ್ಲಿ ದೊರೆಯುತ್ತಿಲ್ಲ. ಈ ನಡುವೆ ಬಾಲಿವುಡ್ ನಟರಾದ ಸೋನೂ ಸೂದ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ….ಇಂತಹ ಸೆಲೆಬ್ರಿಟಿಗಳೆಲ್ಲ ಮುಂದೆ ಬಂದು ತಮ್ಮಿಂದ ಆದಷ್ಟು ಸಹಾಯವನ್ನು ನೀಡುತ್ತಿದ್ದಾರೆ .


ಇದೀಗ ನಟಿ ರಾಖೀ ಸಾವಂತ್ ಪ್ರತಿಯೊಂದು ವಿಷಯದಲ್ಲೂ ಪ್ರತಿಕ್ರಿಯೆಗಳನ್ನು ನೀಡುತ್ತಿರುವ ನಟಿ ಕಂಗನಾ ರನಾವತ್ ಅವರಿಗೆ ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದಿದ್ದಾರೆ. ರಾಖೀ ಸಾವಂತ್ ಹೇಳುತ್ತಾರೆ- “ಕಂಗನಾ ಬಳಿ ಕೋಟಿಗಟ್ಟಲೆ ರೂಪಾಯಿ ಇದೆ. ಹಾಗಾಗಿ ಅವರೂ ಮುಂದೆ ಬಂದು ಈ ಕಷ್ಟದ ಸಮಯದಲ್ಲಿ ದೇಶಸೇವೆಗೆ ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಬೇಕು”


ರಾಖೀ ಸಾವಂತ್ ಮುಂಬೈಗೆ ಬಂದಿದ್ದಾಗ ಅವರ ಕೆಂಪು ಕಾರನ್ನು ನಿಲ್ಲಿಸಿದ ಪತ್ರಕರ್ತರು ಒಂದಿಷ್ಟು ಮಾತಾಡಿದರು.ಆವಾಗ ರಾಖೀ ಅವರು ಪತ್ರಕರ್ತರಿಗೆ ಕೊರೊನಾ ವಿಷಯದಲ್ಲಿ ಒಂದು ದೊಡ್ಡ ಭಾಷಣವನ್ನೇ ನೀಡಿದರು . ಎಲ್ಲರೂ ಡಬಲ್ ಮಾಸ್ಕ್ ಧರಿಸಲು ಹೇಳಿದರು. ಕೈಯಲ್ಲಿ ಸೆನಿಟೈಝರ್ ಬಾಟಲಿ ಹಿಡಿದು ಕಾರಿನಿಂದ ಇಳಿದವರು ಎಲ್ಲರಿಗೂ ದೂರದಲ್ಲೇ ಸ್ಪ್ರೇ ಮಾಡಿದರು.


ಆವಾಗ ಓರ್ವ ಫೋಟೋಗ್ರಾಫರ್ ಅವರಿಗೆ ಪ್ರಶ್ನೆ ಕೇಳಿದ್ದ – “ಕಂಗನಾ ರನಾವತ್ ಅವರು ಭಾರತದ ಸ್ಥಿತಿ ಒಳ್ಳೆಯದಿಲ್ಲ .ರೋಗಿಗಳಿಗೆ ಆಕ್ಸಿಜನ್ ಸಿಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?”ಎಂದು ಪ್ರಶ್ನಿಸಿದ.
ಫೋಟೋಗ್ರಾಫರ್ ರ ಈ ಪ್ರಶ್ನೆಗೆ ಉತ್ತರಿಸಿದ ರಾಖೀ ಸಾವಂತ್ ರು-
“ಆಕ್ಸಿಜನ್ ಸಿಗುತ್ತಿಲ್ಲವೇ, ಓಹೋ! ಕಂಗನಾ ಅವರೇ, ನೀವೂ ದೇಶಸೇವೆ ಮಾಡಲು ಮುಂದೆ ಬನ್ನಿ. ಇಷ್ಟೊಂದು ಕೋಟಿ ರೂಪಾಯಿ ನಿಮ್ಮ ಬಳಿ ಇದೆ, ಆಕ್ಸಿಜನ್ ಖರೀದಿಸಿ ಜನರಿಗೆ ವಿತರಿಸಿ .ನಾವೂ ಇದನ್ನೇ ಮಾಡುತ್ತಿದ್ದೇವೆ” ಎಂದುತ್ತರಿಸಿದರು. ರಾಖಿ ಸಾವಂತ್ ರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇಂದು ಬರಲಿದೆ ಸಲ್ಮಾನ್ ಖಾನ್ ರ ’ರಾಧೇ’ ಯ ಎರಡನೇ ಹಾಡು

ಸಲ್ಮಾನ್ ಖಾನ್ ಅಭಿನಯದ ’ರಾಧೇ…’ ಫಿಲ್ಮ್ ನ ಎರಡನೇ ಹಾಡು ’ದಿಲ್ ದೇ ದಿಯಾ’ ಇಂದು ಶುಕ್ರವಾರ ರಿಲೀಸ್ ಆಗಲಿದೆ. ಈ ಹಾಡಿನ ಟೀಸರ್ ನಿನ್ನೆ ಬಿಡುಗಡೆಯಾಗಿದೆ .


ಚಿತ್ರೀಕರಣವಾಗಿರುವ ಈ ಹಾಡಿನಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ಲಿನ್ ಫರ್ನಾಂಡಿಸ್ ಇದ್ದಾರೆ. ಸಲ್ಮಾನ್ ಖಾನ್ ಟೀಸರ್ ಶೇರ್ ಮಾಡುತ್ತಾ ಅದಲ್ಲಿ ಕ್ಯಾಪ್ಷನ್ ಬರೆದಿದ್ದಾರೆ-
“ಇದು ಕೂಡ ನಿಮಗೆ ಇಷ್ಟವಾಗಬಹುದು ಎಂದು ಉಮೇದು ಇರಿಸಿದ್ದೇನೆ”.
ಪ್ರಭುದೇವ್ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಫಿಲ್ಮ್ ನ ಮೊದಲ ಹಾಡು ೨೬ ಏಪ್ರಿಲ್ ಗೆ ಬಿಡುಗಡೆಯಾಗಿತ್ತು.
ಅದರಲ್ಲಿ ಸಲ್ಮಾನ್ ಮತ್ತು ದಿಶಾ ಪಾಟನಿ ಇದ್ದರು. ಈ ಹಾಡಿಗೆ ಈ ತನಕ ೪.೭ ಕೋಟಿಗೂ ಹೆಚ್ಚು ಜನರ ವ್ಯೂ ದೊರೆತಿದೆ.