೭೩,೬೦೦ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ

ನವದೆಹಲಿ,ಏ.೨೦- ಕೊರೊನಾ ಸೋಂಕು ನಿಗ್ರಹಕ್ಕೆ ಹರಸಾಹಸ ನಡೆಸುತ್ತಿರುವ ಕೇಂದ್ರ ಸರ್ಕಾರ ದೇಶಾದ್ಯಂತ ೭೩,೬೦೦ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.
ಜ. ೧೬ ರಂದು ಆರಂಭವಾದ ಬೃಹತ್ ಲಸಿಕೆ ಅಭಿಯಾನದ ಬಳಿಕ ಇದು ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಾಚರಣೆ ಇದಾಗಿದೆ.
ಕೇವಲ ಒಂದು ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲಸಿಕೆ ವಿತರಣಾ ಕೇಂದ್ರಗಳನ್ನು ಆರಂಭಿಸಿದೆ. ಇದುವರೆಗೆ ಸರಾಸರಿ ೪೫ ಸಾವಿರ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಕಾರ್ಯಾಚರಣೆ ಮಾಡಿತ್ತು, ಈಗ ಇದಕ್ಕಿಂತಲೂ ಹೆಚ್ಚಾಗಿ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಹಾಕಲಾಗುತ್ತಿದೆ.
ನಿನ್ನೆ ರಾತ್ರಿ ೮ ಗಂಟೆವರೆಗೂ ದೇಶಾದ್ಯಂತ ೩೧ ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದ್ದು, ೨೧.೭ ಲಕ್ಷ ಜನರು ಮೊದಲ ಡೋಸ್ ಪಡೆದರೆ, ೯.೩ ಲಕ್ಷ ಜನರು ೨ನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿಗಳು ತಿಳಿಸಿವೆ.
ಕಾರ್ಯನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುತ್ತಿರುವ ಫಲಾನುಭವಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಜ. ೧೬ ರಂದು ಆರಂಭಿಸಲಾದ ಲಸಿಕೆ ಅಭಿಯಾನದ ನಂತರ ಇದುವರೆಗೆ ೧೨.೬೯ ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಈ ಮಧ್ಯೆ ದೇಶಾದ್ಯಂತ ಆಕ್ಸಿಜನ್ ಕೊರತೆ ವ್ಯಾಪಕವಾಗಿ ಕಾಡುತ್ತಿದ್ದು, ಹೆಚ್ಚುವರಿಯಾಗಿ ಆಕ್ಸಿಜನ್ ಇರುವ ಹಾಸಿಗೆ ಮತ್ತು ವೆಂಟಿಲೇಟರ್ ಇರುವ ಐಸಿಯುಗಳ ಪ್ರಮಾಣವನ್ನು ಹೆಚ್ಚಿಸಬೇಕೆಂದು ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ನವದೆಹಲಿ- ಭುವನೇಶ್ವರ, ಜೋಧ್‌ಪುರ, ಪಾಟ್ನಾ, ರಾಯ್ಪುರ, ರಿಷಿಕೇಶ್, ಮಂಗಳಗಿರಿ, ನಾಗ್ಪುರ್, ಭೋಪಾಲ್, ಪುದುಚೆರಿ ಮತ್ತು ಚಂಡೀಘಡ ಸೇರಿದೆ.