೭೦ ಹಾಲು ಡೈರಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ

ಹೊಸಕೋಟೆ.ನ೧೯-ತಾಲ್ಲೂಕಿನಾಧ್ಯಂತ ಸುಮಾರು ೭೦ ಹಾಲು ಡೈರಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಾಲು ಡೈರಿಗಳ ವತಿಯಿಂದ ನೀಡಿದ್ದು ತಾಲ್ಲೂಕಿನಾದ್ಯಂತ ನಮ್ಮ ಸ್ವಂತ ಹಣದಿಂದ ೬೦ ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇವೆ ಎಂದು ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ,,,
ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಓಬಳಹಳ್ಳಿ ಗ್ರಾಮದ ಹಾಲು ಡೈರಿ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಹೊಸಕೋಟೆ ತಾಲ್ಲೂಕಿನಾದ್ಯಂತ ಸುಮಾರು ೨೬೦ ರಿಂದ ೨೭೦ ಹಳ್ಳಿಗಳಿದ್ದು ಅದರಲ್ಲಿ ಹಾಲು ಡೈರಿಗಳ ವತಿಯಿಂದ ಸುಮಾರು ೭೦ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನೀಡಿದ್ದೇವೆ ಜೊತೆಗೆ ಸುಮಾರು ೬೦ ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಮ್ಮ ಸ್ವಂತ ಹಣದಿಂದ ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಸಾರ್ವಜನಿಕರು ಶುದ್ದ ಕುಡಿಯುವ ನೀರನ್ನು ಉಪಯೋಗಿಸುವುದರ ಜೊತೆಗೆ ಕರೋನಾ ಎಂಬ ಮಹಾಮಾರಿಯಿಂದ ಮುಕ್ತಿ ಹೊಂದಲು ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಬಳಸಬೇಕು ಎಂದರು,
ನಂತರ ಬೆಂಗಳೂರು ಹಾಲು ಡೈರಿ ನಿರ್ದೇಶಕ ಸಿ.ಮಂಜುನಾಥ್ ಮಾತನಾಡಿ ಓಬಳಹಲ್ಳಿ ಗ್ರಾಮದಲ್ಲಿ ಹಾಲು ಡೈರಿ ಉತ್ತಮವಾಗಿದ್ದು ಗುಣಮಟ್ಟದ ಹಾಲನ್ನು ನೀಡುತ್ತಿರುವ ನಿಮಗೆ ನಾನು ಅಭಿನಂದಿಸುತ್ತೇನೆ,ಮತ್ತು ಈ ಬಾಗದಲ್ಲಿ ಶುದ್ದ ಕುಡಿಯುವ ನೀರಿನ ತೊಂದರೆ ಇರುವುದರಿಂದ ನಮ್ಮ ಡೈರಿ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕ ನೀಡಿದ್ದೇವೆ ಇದನ್ನು ಕಿಡಿಗೇಡಿಗಳಿಂದ ಜೋಪಾನವಾಗಿ ನೋಡಿಕೊಳ್ಳಬೇಕು ಎಂದರು, ಕಾರ್ಯಕ್ರಮದಲ್ಲಿ ಎಪಿಎಂಸಿ ಅದ್ಯಕ್ಷರಾದ ಕೊಂಡ್ರಹಳ್ಳಿ ಧರ್ಮೇಶ್, ಓಬಳಹಳ್ಳಿ ಮುಖಂಡ ಮುನಿರಾಜು, ಹೆತ್ತಕ್ಕಿ ಗ್ರಾಮ ಪಂಚಾಯ್ತಿ ಮಾಜಿ ಉಪಾದ್ಯಕ್ಷ ಜಗದೀಶ್, ತಾವರೆಕೆರೆ ರಾಜಶೇಖರ್, ಡೈರಿ ಅದ್ಯಕ್ಷ ಸಿದ್ದಲಿಂಗಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಹೊಸಕೋಟೆ ಡೈರಿ ಉಪ ವ್ಯವಸ್ಥಾಪಕ ವಿಜಯ್ ಬಾಸ್ಕರ್. ನರಸಿಂಹಯ್ಯ, ಶ್ರೀರಾಮ್, ಹಾಗೂ ಇತರೆ ಮುಕಂಡರು ಇದ್ದರು.