೭೦೭ ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ

ರಾಯಚೂರು.ಏ.೧೮- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೭೦೭ ನೇ ದಿನಕ್ಕೆ ಕಾಲಿಟ್ಟಿದೆ ನಿರಂತರ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ೨೩ ತಿಂಗಳು ಗತಿಸಿ ಮುಂದುವರೆದಿದೆ.
ಕೇಂದ್ರ ಚುನಾವಣೆಗಳ ಭರಾಟೆಯಲ್ಲಿ ಕೇಂದ್ರ ಸರ್ಕಾರ ಕಿವಿಗೊಡದಂತಾಗಿದೆ. ಆದ್ಯಾಗೂ ನಿರಂತರ ಹೋರಾಟ ಮುಂದುವರಿಸಿ, ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಈ ಹೋರಾಟ ತೀವ್ರಗೊಳ್ಳುತ್ತದೆ. ಎಂದು ಹೋರಾಟಗಾರರಾದ ಹಟ್ಟಿಯ ನಿವೃತ್ತ ಅಧಿಕಾರಿಗಳಾದ ಎಸ್.ತಿಮ್ಮಾರೆಡ್ಡಿ ಮಾತನಾಡಿದರು. ಇಂದು ನಡೆದ ಧರಣಿ ಸತ್ಯಾಗ್ರದಲ್ಲಿ ಈ ಕೆಳಕಂಡ ಹೋರಾಟಗಾರರು ಭಾಗವಹಿಸಿದ್ದರು. ಅಶೋಕ್ ಕುಮಾರ್ ಜೈನ್, ಡಾ.ಎಸ್.ಎಸ್ ಪಾಟೀಲ್, ತಿಮ್ಮಾರೆಡ್ಡಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ಎಸ್ ಮಾರಪ್ಪ ವಕೀಲ್, ಗುರುರಾಜ್ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಮಹೀಂದ್ರ ಸಿಂಘ್, ವೀರೇಶ್ ಬಾಬು, ಪರಷು ರಾಮ್, ಆರಿಫ್ ಮಿಯಾ ನೆಲಹಾಳ್, ವೆಂಕಟರೆಡ್ಡಿ ದಿನ್ನಿ, ಶ್ರೀನಿವಾಸ್ ನಾಗಲದಿನ್ನಿ, ಸಂಜಯ್ ವೈಷ್ಣವ, ಬೆಟ್ಟಪ್ಪ ಹೋಕ್ರಾಣಿ, ಪ್ರತಾಪ್ ರೆಡ್ಡಿ, ಮುಂತಾದವರು ಭಾಗವಹಿಸಿದ್ದರು.