೭೦೨ ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ

ರಾಯಚೂರು.ಏ.೧೩- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೭೦೨ ನೇ ದಿನಕ್ಕೆ ಕಾಲಿಟ್ಟಿದೆ.
ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಜಾನ್ ವೆಸ್ಲಿ, ಎಸ್.ತಿಮ್ಮಾರೆಡ್ಡಿ, ರಮೇಶ್ ರಾವ್ ಕಲ್ಲೂರ್ಕರ್, ಶ್ರೀನಿವಾಸ ನಾಗಲದಿನ್ನಿ, ಮಲ್ಲನಗೌಡ ಹದಿನಾಳ, ಎಸ್.ಮಾರಪ್ಪ ವಕೀಲರು, ಸೋಮಶೇಖರ್, ಜಗದೀಶ್ ಪೂರ್ತಿಪ್ಲಿ, ಜಸವಂತರಾವ್ ಕಲ್ಯಾಣಕಾರಿ, ವೆಂಕಟರೆಡ್ಡಿ ದಿನ್ನಿ, ಬೆಟ್ಟಪ್ಪ ವಕ್ರಾಣಿ, ಅಜೀಜ್, ಆಸಿಫ್ ಮುಂತಾದವರು ಭಾಗವಹಿಸಿದ್ದರು.