೭ನೇ ಬಾರಿಗೆ ನಿತೀಶ್‌ಗೆ ಸಿಎಂ ಪಟ್ಟ


ಪಾಟ್ನಾ, ನ. ೧೭- ಎನ್‌ಎಡಿ ಮೈತ್ರಿಕೂಟದ ನಾಯಕ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಸತತ ನಾಲ್ಕನೆ ಅವಧಿಗೆ ೭ ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ನಿನ್ನೆ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನಿತೀಶ್ ಕುಮಾರ್ ಅವರಲ್ಲದೆ ಬಿಜೆಪಿಯ ತಾರ ಕಿಶೋರ್ ಪ್ರಸಾದ್ , ರುತುದೇವಿ ಇಬ್ಬರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ, ಜೆಡಿಯು, ಎಚ್‌ಎಎಂ ಮತ್ತು ವಿಐಪಿ ಪಕ್ಷದ ೮ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್‌ನಲ್ಲಿ ವಿಜೇತರಾಗಿದ್ದ ಶ್ರೇಯಸಿ ಸಿಂಗ್ ಅವರು ಜೆಡಿಯು ಪಕ್ಷದಿಂದ ಜುಮೈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದೀಗ ನಿತೀಶ್ ಕುಮಾರ್ ಸಂಪುಟದಲ್ಲಿ ಅತಿ ಕಿರಿಯ ಸಚಿವೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಜೆಡಿಯು ಪಕ್ಷದ ಬೀಜೇಂದ್ರ ಪ್ರಸಾದ್ ಯಾದವ್, ವಿಜಯ ಕುಮಾರ್ ಚೌದರಿ, ಅಶೋಕ್ ಚೌಧರಿ, ಶರವಣ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಸಭಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದ್ದು ವಿಜಯ್ ಕುಮಾರ್ ಚೌಧರಿ ಅವರಿಗೆ ಸಿಗುವ ಸಾಧ್ಯತೆಗಳಿವೆ.
ಮೋದಿ ಕೇಂದ್ರ ಸಚಿವ ಸಾಧ್ಯತೆ;
೨೦೦೫ ರಿಂದ ನಿತೀಶ್ ಕುಮಾರ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಖಾತೆ ನಿರ್ವಹಿಸಿದ್ದಾರೆ ಕುಮಾರ್ ಮೋದಿಯವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿಲ್ಲ.
ಆರ್ ಜೆ ಡಿ ಬಹಿಷ್ಕಾರ: ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆರ್ ಜೆಡಿ ಪಕ್ಷ ಬಹಿಷ್ಕಾರ ಹಾಕಿತ್ತು. ಎನ್‌ಡಿಎ ಮಿತ್ರಪಕ್ಷಗಳಾದ ಹಿಂದುಸ್ತಾನಿ ಅವಾರ್ಡ್ ಮೋರ್ಚಾದಿಂದ ಸಂತೋಷ್ ಮಾಂಜಿ, ವಿಕಾಸ್ ಇಂಸಾನ್ ಪಕ್ಷದಿಂದ ಮುಕೇಶ್ ಮಲ್ಲ ಅವರು ಸಚಿವರಾಗಲಿದ್ದಾರೆ.