೬ ವರ್ಷಗಳ ಬಳಿಕ ಕಿಚ್ಚ, ದರ್ಶನ್ ಮುಖಾಮುಖಿ

ಬೆಂಗಳೂರು,ಆ.೨೭- ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿರುವ ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ೬ ವರ್ಷಗಳ ನಂತರ ಮುಖಾಮುಖಿಯಾಗಿದ್ದು ಮತ್ತೆ ಸ್ನೇಹಿತರಾಗಿ ಮುಂದುವರಿಯುತ್ತಾರಾ ಎನ್ನುವ ಕುತೂಹಲ ಹೆಚ್ಚಿದೆ.
ಸಂಸದೆ ಹಾಗು ಚಿತ್ರನಟಿ ಸುಮಲತಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ತಾರಾ ನಟರು ಮುಖಾಮುಖಿಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.
ಆರಂಭದಲ್ಲಿ ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್, ವೃತ್ತಿ ಸಂಬಂದಿಸಿದ ಹೇಳಿಕೆ ಪರಸ್ಪರ ಆರೋಪ,ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಕಳೆದ ೬ ವರ್ಷಗಳಿಗೂ ಹೆಚ್ಚು ಸಮಯದಿಂದ ಇಬ್ಬರೂ ಎಲ್ಲಿಯೂ ಭೇಟಿಯಾಗಿರಲಿಲ್ಲ ಜೊತೆಗೆ ಒಬ್ಬರ ಬಗ್ಗೆ ಮತ್ತೊಬ್ಬರು ಯಾವುದೇ ಹೇಳಿಕೆ ನೀಡುವ ಗೋಜಿಗೆ ಹೋಗಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದ ಇಬ್ಬರು ನಟನರೂ ತಮ್ಮ ವೃತ್ತಿ ಬದುಕಿನ ಕಡೆಗೆ ಆದ್ಯತೆ ನೀಡಿದ್ದರು.
ಇದೀಗ ನಟಿ ಹಾಗು ಸಂಸದೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬದಲ್ಲಿ ಇಬ್ಬರಿ ತಾರಾ ನಟರು ಮುಖಾಮುಖಿಯಾಗಿದ್ದು ಮತ್ತೆ ಜೊತೆಯಾಗ್ತಾರಾ ಎನ್ನುವ ಕುತೂಹಲ ಮತ್ತು ಅಚ್ಚರಿ ಇಬ್ಬರ ಅಭಿಮಾನಿಗಳಲ್ಲಿ ಮನವಿ ಮಾಡಿದೆ.
ಸಮಲತಾ ಮದ್ಯಸ್ಥಿಕೆಯಲ್ಲಿ ರಾಜಿ:
ಸುಮಲತಾ ಹುಟ್ಟುಹಬ್ಬದ ಪ್ರಯುಕ್ತ ಖಾಸಗಿ ಹೋಟೆಲ್?ನಲ್ಲಿ ಆಯೋಜನೆ ಮಾಡಲಾಗಿದ್ದ ಪಾರಚಟಿಯಲ್ಲಿ ಆರು ವರ್ಷದ ಬಳಿಕ ಒಂದೇ ಪಾರ್ಟಿಯಲ್ಲಿ ನಟರಾದ ದರ್ಶನ್ ಹಾಗೂ ಸುದೀಪ್ ಕಾಣಿಸಿಕೊಂಡಿದ್ದರು. ಇಬ್ಬರನ್ನು ಒಂದುಗೂಡಿಸಲು ಸುಮಲತಾ ರಾಜೀ ಸಂದಾನ ಮಾಡಿದ್ದಾರೆ ಎನ್ನಲಾಗಿದೆ.ಮಧ್ಯಾರಾತ್ರಿಯವರೆಗೂ ನಡೆದ ಪಾರ್ಟಿಯಲ್ಲಿ ರಾಜೀ ಸಂಧಾನವೂ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪೂರಕವೆಂಬಂತೆ ಪಾರ್ಟಿಯಲ್ಲಿ ಇಬ್ಬರೂ ಪಾರ್ಟಿಯಲ್ಲಿ ಕಾಣಸಿಕೊಂಡಿದ್ದ ವಿಡಿಯೋಗಳು ಹರಿದಾಡುತ್ತಿವೆ . ಈ ಬಗ್ಗೆ ಸದ್ಯಕ್ಕೆ ಯಾವುದೇ ಹೇಳಿಕೆ ಬಂದಿಲ್ಲ.