೬.ಕೆಸವಿನಗೆಡ್ಡೆಯ ಫ್ರೈ

ಬೇಕಾಗುವ ಪದಾರ್ಥಗಳು:

  • ಎಣ್ಣೆ – ೧ ಸೌಟು
  • ಈರುಳ್ಳಿ – ೨
  • ಸಿಪ್ಪೆತೆಗೆದ ಕೆಸವಿನಗೆಡ್ಡೆ – ೨ ಲೋಟ
  • ಧನಿಯಾಪುಡಿ – ರುಚಿಗೆ ತಕ್ಕಷ್ಟು
  • ಅರಿಶಿನಪುಡಿ – ರುಚಿಗೆ ತಕ್ಕಷ್ಟು
  • ಅಚ್ಚಖಾರದಪುಡಿ – ರುಚಿಗೆ ತಕ್ಕಷ್ಟು
  • ಉಪ್ಪು – ರುಚಿಗೆ ತಕ್ಕಷ್ಟು

ವಿಧಾನ;
ಎಣ್ಣೆಗೆ ಈರುಳ್ಳಿ ಹಾಕಿ ಬಾಡಿಸಿ, ಸಿಪ್ಪೆತೆಗೆದ ಕೆಸವಿನಗೆಡ್ಡೆ ಹಾಕಿ, ಧನಿಯಾ ಪುಡಿ, ಅರಿಶಿನಪುಡಿ, ಉಪ್ಪು, ಅಚ್ಚಖಾರದಪುಡಿ ಹಾಕಿ ತಟ್ಟೆ ಮುಚ್ಚಿ ಬೇಯಿಸಬೇಕು.
ಗ್ರೇವಿ ತರ ನೆಂಚಿಕೊಳ್ಳಲು ಬೇಕಾದಲ್ಲಿ ಟೊಮೊಟೊ(ಪ್ಯೂರಿ) ರಸ ಹಾಕಬಹುದು.