೬೮೮ ನೇ ದಿನಕ್ಕೆ ಮುಂದುವರೆದ ಏಮ್ಸ್ ಧರಣಿ

ರಾಯಚೂರು.ಮಾ.೩೦- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೮೮ ನೇ ದಿನಕ್ಕೆ ಮುಂದುವರೆದಿದೆ.
ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ
ಐಐಟಿ ಇಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ. ಬಸವರಾಜ್ ಕಳಸ ,ಅಶೋಕ್ ಕುಮಾರ್ ಜೈನ್, ಕಾಮರಾಜ್ ಪಾಟೀಲ್, ಜಾನ್ ವೆಸ್ಲಿ, ಎಸ್. ತಿಮ್ಮಾರೆಡ್ಡಿ ,ವೆಂಕಟರೆಡ್ಡಿ ದಿನ್ನಿ, ಆರಿಫ್ ಮಿಯಾ ನೆಲಹಾಳ್, ಜಸವಂತರಾವ್ ಕಲ್ಯಾಣಕಾರಿ, ರಮೇಶ್ ರಾವ್ ಕಲ್ಲೂರ್ಕರ್, ವೀರೇಶ್ ಬಾಬು, ವೀರಭದ್ರಯ್ಯ ಸ್ವಾಮಿ, ಗುರುರಾಜ್ ಕುಲಕರ್ಣಿ, ಮಲ್ಲನಗೌಡ ಹದಿನಾಳ, ನರಸಪ್ಪ ಬಾಡಿಯಾಳ್, ವಿಶ್ವನಾಥ್, ನಾಗರಾಜ್ ಮುಂತಾದವರು ಭಾಗವಹಿಸಿದ್ದರು