
ಹಾಂಗಕಾಂಗ,ಅ.೧-ವಿಡಿಯೋ ರೀಲ್ಸ್ ಮಾಡಲು ಹೋಗಿ ಪ್ರಪಂಚದಾದ್ಯಂತದ ವಿವಿಧ ಗೋಪುರಗಳು ಹಾಗೂ ಗಗನಚುಂಬಿ ಕಟ್ಟಡಗಳನ್ನು ಏರಿ ಹೆಸರುವಾಸಿಯಾದ ಮೂವತ್ತರ ಹರೆಯದ ರೆಮಿ ಲುಸಿಡಿ ೬೮ನೇ ಮಹಡಿಯಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ವರದಿಯಾಗಿದೆ. ಸಾಹಸ ಕ್ರೀಡೆಗಳಿಗೆ ಹೆಸರಾದ ರೆಮಿ ಲುಸಿಡಿ ಫ್ರೆಂಚ್ ‘ಡೇರ್ ಡೆವಿಲ್’ ಎಂದೇ ಖ್ಯಾತಿಯಾಗಿದ್ದರು.
ಲುಸಿಡಿ ೭೨೧ ಅಡಿ ಎತ್ತರದ ಟ್ರೆಗುಂಟರ್ ಟವರ್‌ನ ೬೮ ನೇ ಮಹಡಿಯನ್ನು ತಲುಪಿದ್ದರು. ಆದರೆ ೬೮ನೇ ಮಹಡಿಯವರೆಗೆ ಹತ್ತಿದ ರೆಮಿ ಲುಸಿಡಿ ಅಲ್ಲಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ರೆಗುಂಟರ್ ಟವರ್ ಇದು ಹಾಂಗ್ ಕಾಂಗ್‌ನ ಎತ್ತರದ ವಸತಿ ಕಟ್ಟಡವಾಗಿದೆ.

ಸಂಜೆ ೭.೩೦ರ ವೇಳೆಗೆ ಕಟ್ಟಡ ಸಮೀಪ ಬಂದಿದ್ದ ರೆಮಿ ಲುಸಿಡಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ೪೦ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನ ಭೇಟಿಗೆ ಬಂದಿದ್ದಾಗಿ ತಿಳಿಸಿದ್ದರು.
ಅದರಂತೆ ೬೮ನೇ ಮಹಡಿಗೆ ಹೋಗಿ ಅಲ್ಲಿಂದ ಫೋಟೋ ತೆಗೆದುಕೊಳ್ಳುವ ಹಂಬಲದಿಂದ ರೆಮಿ ಲುಸಿಡಿ ಕೊನೆಯ ಫ್ಲೋರ್‌ನ ಪೆಂಟ್‌ಹೌಸ್‌ಗೆ ಒಳಗೆ ಹೋಗುವ ಪ್ರಯತ್ನ ಮಾಡಿದ್ದಾರೆ.
ಕಟ್ಟಡದ ಮೇಲಿನ ಭಾಗದ ಪೆಂಟ್‌ಹೌಸ್ ತನಕ ತಲುಪಿದ್ದ ರೆಮಿ ಲುಸಿಡಿ ಗೋಡೆಯಿಂದ ಮುಂದೆ ಹತ್ತಲಾಗದೆ ಪರದಾಡಿದ್ದರು ಅಲ್ಲಿನ ಕಿಟಕಿಯನ್ನು ಬಡಿದು ಮನೆಯ ಒಳಗಿನವರನ್ನು ಕರೆದಿದ್ದರು. ಆದರೆ, ಒಳಗಿನ ವ್ಯಕ್ತಿ ಹೊರಗೆ ಬಂದು ಸಹಾಯ ಮಾಡಲು ವೇಳೆಗಾಗಲೇ ರೆಮು ಲುಸಿಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಲುಸಿಡಿ ಸಾವಿನ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.