೬೭೨ ನೇ ದಿನಕ್ಕೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ

ರಾಯಚೂರು.ಮಾ.೧೪- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೭೨ ನೇ ದಿನಕ್ಕೆ ಕಾಲಿಟ್ಟಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐ.ಐ.ಟಿ ಇಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ರಮೇಶ್ ರಾವ್ ಕಲ್ಲೂರ್ಕರ್, ಕಾಮರಾಜ್ ಪಾಟೀಲ್, ಡಾ.ಎಸ್.ಎಸ್.ಪಾಟೀಲ್, ಅಮರೇಗೌಡ ಪಾಟೀಲ್, ಮಲ್ಲನಗೌಡ ಹದ್ದಿನಾಳ, ಜಸವಂತರಾವ್ ಕಲ್ಯಾಣಕಾರಿ, ವಿನಯ್ ಕುಮಾರ್ ಚಿತ್ರಗಾರ, ಅನಿತಾ ಮಂತ್ರಿ ನವಲ್ಕಲ್, ಚನ್ನಪ್ಪ, ಗುರುರಾಜ್ ಕುಲಕರ್ಣಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ರಾಘವೇಂದ್ರ ಗೌಡ, S ತಿಮ್ಮಾರೆಡ್ಡಿ, ಡಾ.ಬಾಬುರಾವ್ ಶೆಗುನ್ಸಿ, ಪ್ರಸನ್ನ ಅಲಂಪಲ್ಲಿ, ವೆಂಕಟರೆಡ್ಡಿ ದಿನ್ನಿ, ಶ್ಯಾಮ್, ವೀರಭದ್ರಯ್ಯ ಸ್ವಾಮಿ, ಶಂಕರ್ ಶಾಸ್ತ್ರಿ, ಪಂಪನಗೌಡ ಮಾಚನೂರ್, ಚಂದ್ರಶೇಖರ್ ಭಂಡಾರಿ, ಸಂಗಣ್ಣ ಕಡಿ, ನಾಸೀರ್ ಹೊಸೂರ್, ಬಾಬು ಕವಿತಾಳ, ಮಲ್ಲಿಕಾರ್ಜುನ್, ಸಂತೋಷ್ ಜೈನ್, ಸಚಿತ್, ಬೆಟ್ಟಪ್ಪ ಹೊಕ್ರಾಣಿ, ಜಗದೀಶ್, ಖಾಷಿಮಪ್ಪ, ಖಾಜಾ ಮೋಹಿನುದ್ದಿನ್, ಜನಾರ್ದನ್ ರೆಡ್ಡಿ ಯರಗೇರಾ ಹಾಗೂ S ಏಇS ಪ್ಯಾರಾ ಮೆಡಿಕಲ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.