
ಶ್ರೀನಗರ ,ಜು.೬-ಹಲವು ಅಡ್ಡಿ -ಆತಂಕಗಳ ಸೇನೆಯ ಬಿಗಿ ಭದ್ರತೆಯ ಮಧ್ಯೆ ಜುಲೈ ೧ ರಂದು ಆರಂಭಗೊಂಡ ಅಮರನಾಥ ತೀರ್ಥಯಾತ್ರೆಯ ಮೊದಲ ೫ ದಿನಗಳಲ್ಲಿ ೬೭,೭೦೦ಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ೧೮,೩೫೪ ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ನಿಂದ ಅಮರನಾಥ ಗುಹೆ ದೇಗುಲಕ್ಕೆ ತೆರಳಿದರು.
ಇವರಲ್ಲಿ ೧೨೪೮೩ ಪುರುಷರು, ೫೧೪೬ ಮಹಿಳೆಯರು, ೪೫೭ ಮಕ್ಕಳು, ೨೬೬ ಸಾಧುಗಳು ಮತ್ತು ೨ ಸಾಧ್ವಿಗಳು ಸೇರಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಯಾತ್ರಾರ್ಥಿಗಳು ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಅದು ಹೇಳಿದೆ.
ಯಾತ್ರಿಕರು ಬಮ್ ಬಮ್ ಬೋಲೆ ಎಂಬ ಮಂತ್ರ ಪಠಣದೊಂದಿಗೆ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಯಾತ್ರೆ ಸುಗಮವಾಗಿ ಸಾಗಲು ವ್ಯಾಪಕ ವ್ಯವಸ್ಥೆ ಮಾಡಲಾಗಿದೆ
೬೨ ದಿನಗಳ ಶ್ರೀ ಅಮರನಾಥ ಯಾತ್ರೆಯು ಆಗಸ್ಟ್ ೩೧, ೨೦೨೩ ರಂದು ಕೊನೆಗೊಳ್ಳಲಿದೆ.