೬೫ನೇ ಕ್ನನ್ನಡ ರಾಜ್ಯೋತ್ಸವ

ರಾಯಚೂರು.ನ.೧- ೬೫ನೇ ಕ್ನನ್ನಡ ರಾಜ್ಯೋತ್ಸವದಂಗವಾಗಿ ನಗರದ ಹರಿಜನವಾಡದ ಸವಾರಮ್ಮ ದೇವಸ್ಥಾನದ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗೋಪಾಲ್ ಖಾನಾಪುರ ಅವರು ಪೂಜೆ ಮಾಡಿದರು. ಕನ್ನಡ ನಾಡಿನ ಬಾವುಟದ ಧ್ವಜಾರೋಹಣವನ್ನು ಹೆಚ್.ಕೆ.ರವಿಕುಮಾರ್ ನೆರವೇರಿಸಿದರು. ಮುದ್ದನ್ನ ಮಾಡಗಿರಿ ಕನ್ನಡ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಗೋವಿಂದ್, ತಾಯರಾಜ್, ಜೆ.ಎಂ.ಮೌನೇಶ್, ಆರ್.ನರೇಶ್, ಆರ್.ಮಾರೆಪ್ಪ, ನರಸಿಂಹಲು(ನಾಯುಡು) ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.