೬೩೫ ನೇ ದಿನಕ್ಕೆ ಕಾಲಿಟ್ಟ ಏಮ್ಸ್ ಹೋರಾಟ

ರಾಯಚೂರು.ಫೆ.೦೬- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೩೫ ನೇ ದಿನಕ್ಕೆ ಕಾಲಿಟ್ಟಿದೆ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐ.ಐ.ಟಿಯಿಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಲಾಯಿತು.
ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಕಾಮರಾಜ ಪಾಟೀಲ್, ಡಾ.ಎಸ್.ಎಸ್.ಪಾಟೀಲ್, ಜಾನ್ ವೆಸ್ಲಿ, ಜಗದೀಶ್ ಪುರತಿಪ್ಲಿ, ನರಸಪ್ಪ ಬಾಡಿಯಾಲ್, ಜಸ್ವಂತ್ ರಾವ್ ಕಲ್ಯಾಣ್ಕಾರಿ, ರಮೇಶ್ ಕಲ್ಲುರ್ಕರ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ವೆಂಕಟರೆಡ್ಡಿ ದಿನ್ನಿ, ಗುರುರಾಜ್ ಕುಲಕರ್ಣಿ, ಮಲ್ಲನಗೌಡ ಹದ್ದಿನಾಳ, ನಾಸೀರ್ ಹೊಸೂರ್, ಸುಲೋಚನಾ ಸಂಘ, ದೇವೇಂದ್ರಪ್ಪ ಧನ್ವಂತರಿ, ನಿಜಾಮುದ್ದೀನ್ ಹಳ್ಳಪ್ಪನ ಹುಡ, ನಾಗರಾಜ್, ಡಿ.ಏ.ಮೆಹಬೂಬ್, ಮುಂತಾದವರು ಭಾಗವಹಿಸಿದ್ದರು.