೬೧೪ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ

ರಾಯಚೂರು.ಜ.೧೬- ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೧೪ ನೇ ದಿನಕ್ಕೆ ಕಾಲಿಟ್ಟಿದೆ.
ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯು ೨೦ ತಿಂಗಳಿಂದ ನಡೆಯುತ್ತಿರುವ ಈ ಚಳಿವಳಿಯನ್ನ ಕೇಂದ್ರ ಸರ್ಕಾರ ಮಾನ್ಯತೆ ನೀಡಿ, ಕೂಡಲೇ ಬೇಡಿಕೆ ಈಡೇರಿಸಲು ಹೋರಾಟಗಾರ ಒತ್ತಾಯವಾಗಿದೆ. ಮಹಾತ್ವಾಕಾಂಕ್ಷಿ ಜಿಲ್ಲೆ ರಾಯಚೂರು ಎಂದು ಘೋಷಿಸಿದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ನಂತರ ಯಾವ ಮಹತ್ವಕಾಂಕ್ಷಿ ಯೋಜನೆ ನೀಡಿಲ್ಲ. ಈಗಲಾದರೂ ರಾಯಚೂರು ಜನತೆಯ ಬೇಡಿಕೆಯನ್ನು ಈಡೇರಿಸಿ, ಏಮ್ಸ್ ಘೋಷಣೆ ಮಾಡಿದರೆ ಮಹಾತ್ವಾಕಾಂಕ್ಷಿ ಜಿಲ್ಲೆ ಎಂಬ ಹೆಸರಿಗೆ ಒಂದು ಅರ್ಥ ಬರುತ್ತದೆ ಎಂದರು.
ಹೋರಾಟದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ವೆಂಕಟರೆಡ್ಡಿ, ನರಸಪ್ಪ ಬಾಡಿಯಾಲ್, ಜಾನ್ ವೆಸ್ಲಿ, ವಿನಯ್ ಕುಮಾರ್ ಚಿತ್ರಗಾರ, ಡಾ.ಎಸ್.ಎಸ್.ಪಾಟೀಲ್, ಗುರುರಾಜ್ ಕುಲಕರ್ಣಿ, ಮಲ್ಲನಗೌಡ ಹದ್ದಿನಾಳ್, ವೆಂಕಟರೆಡ್ಡಿ ದಿನ್ನಿ. ರಮೇಶ್ ಕಲ್ಲುರ್ಕರ, ಸಂತೋಷ್ ಜೈನ್, ದೇವೇಂದ್ರಪ್ಪ ಧನ್ವಂತರಿ, ಸಾಯಿ ಕುಮಾರ್, ಸಂತೋಷ್ ಜೈನ್, ಹೆಮರಾಜ್ ಅಸ್ಕಿಹಾಳ್, ಅಶ್ವಥ್ ನಾರಾಯಣ, ಎಂ.ಆರ್.ಬೇರಿ, ನರಸಿಮುಲು, ತಾಯಪ್ಪ ಮರಿಚಟಾಲ್, ಅನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.