೬ತಿಂಗಳಿಂದ ಅನುದಾನ ಇಲ್ಲ ಸಾಲಮಾಡಿ ಔಷಧಿ ತರುವ ಸಿಬ್ಬಂದಿ ವರ್ಗ


ಚಿದಾನಂದ ದೊರೆ
ಸಿಂಧನೂರು.ನ.೨೫-ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳು ಕಷ್ಟ ಅನುಭವಿಸುತ್ತಿರುವುದು ಸತ್ಯ. ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳ ಹಿತದೃಷ್ಟಿಯಿಂದ ಖಾಸಗಿ ಔಷಧ ಅಂಗಡಿ ಮಾಲೀಕರಿಂದ ಔಷಧಿ ತರುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ಔಷಧೋಪಚಾರಗಳು ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಸರ್ಕಾರ, ಆರೋಗ್ಯ ಸಚಿವರು, ಶಾಸಕರು ಹೇಳಿದ್ದು ಆದರೆ ೬ತಿಂಗಳುಗಳಿಂದ ತಾಲೂಕಾ ಸಾರ್ವಜನಿಕ ಆಸ್ಪತೆ ಅನುದಾನ ಬಾರದಿರುವುದರಿಂದ ಖಾಸಗಿ ಔಷಧ ಅಂಗಡಿ ಮಾಲೀಕರಿಂದ ಔಷಧಗಳನ್ನು ಸಾಲದ ರೂಪದಲ್ಲಿ ತರಸಲಾಗುತ್ತಿದೆ ಎಂದು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಿಜಯ ಪ್ರಕಾಶ ಪತ್ರಿಕೆಗೆ ಸ್ಪಷ್ಟನೆ ನೀಡಿದರು.
ನಾಯಿ ಕಚ್ಚಿದಾಗ ರೋಗಿಗೆ ನೀಡುವ ಇಂಜಕ್ಷನ್ ಸೇರಿದಂತೆ ಆಸ್ಪತ್ರೆಯ ಜನ ಔಷಧ ಅಂಗಡಿಯಲ್ಲಿ ಸಿಗದ ಆಂಟಿ ಬ್ಯಾಟಿಕ್ ಸೇರಿದಂತೆ ಇನ್ನೀತರ ಇನ್ನೀತರ ಔಷಧಗಳನ್ನು ಸರ್ಕಾರ ಸರಬರಾಜು ಮಾಡದ ಕಾರಣ ಖಾಸಗಿ ಔಷಧ ಮಾಲೀಕರಲ್ಲಿ ಕೋರಿ ಸುಮಾರು ೬ತಿಂಗಳುಗಳಿಂದ ಔಷಧಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದ್ದು ವಾರ್ಡ್ ನೀರಿನ ಸರಬರಾಜು ಇಲ್ಲದ ಕಾರಣ ಮಹಿಳೆಯರು ಸೇರಿದಂತೆ ದಾಖಲಾದ ಒಳ ರೋಗಿಗಳು ನೀರಿಗಾಗಿ ಪರದಾಡುತ್ತಿದ್ದು ಇದರ ಬಗ್ಗೆ ಆಸ್ಪತ್ರೆಯ ಮುಖ್ಯ ವ್ಯದ್ಯಾಧಿಕಾರಿ ಡಾ|| ಹನುಮಂತ ರೆಡ್ಡಿ ಗಮನಹರಿಸದಿರುವುದರಿಂದ ವಾರ್ಡ್ ಬಾಥ್ ರೂಮಗಳು ಗಬ್ಬು ನಾರುತ್ತಿವೆ.
ಎಕ್ಸ್‌ರೇ ಸಿಬ್ಬಂದಿ ಇಬ್ಬರಲ್ಲಿ ಒಬ್ಬರು ವರ್ಗಾವಣೆಯಾಗಿರುವುದರಿಂದ ಒಬ್ಬ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಅವರ ರಜೆ ಹೋದರೆ ಎಕ್ಸ್‌ರೇಗು ರಜೆ ಹಾಗಾಗಿ ಸಿಬ್ಬಂದಿಗಳನ್ನು ಕೆಲಸಕ್ಕೆ ನೇಮಕ ಮಾಡುವುದು ಸರ್ಕಾರ ವರ್ಗಾಣೆ ಮಾಡುವುದು ಸರ್ಕಾರ ಅದಕ್ಕೆ ನಾವೇನು? ಮಾಡುವುದು ಎಕ್ಸ್‌ರೇ ಕೆಲಸಕ್ಕೆ ಇನ್ನೊಬ್ಬ ಸಿಬ್ಬಂದಿಯನ್ನು ಡಿಹೆಚ್‌ಓ ಏರವಲು ಸೇವೆಗೆ ಆದೇಶ ಮಾಡಿದರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ.
ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ನೋಡಿದರೆ ಎಲ್ಲವು ಸರಿಯಿಲ್ಲ ಎಂಬುವುದು ತಿಳಿದು ಬರುವುದು. ೧೨ಗಂಟೆಗೆ ಕಣ್ಣು ತಪಾಸಣೆ ವೈದ್ಯಾಧಿಕಾರಿ ಡಾ|| ಸುರೇಶ ಗೌಡ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂತು. ಆಸ್ಪತ್ರೆಯಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಒಂದು ಕಡೆ, ಸರ್ಕಾರಿ ವೇತನ ಪಡೆದು ಮೈಮರೆತು ಹೊರಗಡೆ ತಿರುಗಾಡುವ ಸಿಬ್ಬಂದಿಗಳು ಇನ್ನೊಂದು ಕಡೆ ಇವರನ್ನು ನಿಯಂತ್ರಿಸಬೇಕಾದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಹನುಮಂತ ರೆಡ್ಡಿ ಮತ್ತೋಂದು ಕಡೆ.