
ಮಾನ್ವಿ ಸೆ ೧೦ :- ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಿಪುರ ಹಾಗೂ ಸಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಖರಾಬದಿನ್ನಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗ್ರಾಮದ ಬೀದಿಗಳಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನ ಜಾಗೃತಿ ಜಾಥ ಮೂಡಸಲಾಯಿತ್ತು.
ನಂತರ ಸಮುದಾಯ ಆರೋಗ್ಯ ಅಧಿಕಾರಿ ಹನುಮಂತ ಮಾತನಾಡಿ ಅವರು ಪಾಲಕರು ನಿಮ್ಮ ಲಸಿಕೆಯನ್ನು ಪಡೆಯದ. ಮಕ್ಕಳನ್ನು ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನದಲ್ಲಿ ಲಸಿಕಾ ಕೇಂದ್ರಕ್ಕೆ ಕರೆತಂದು ಮಕ್ಕಳ ಸಂಪೂರ್ಣ ಲಸಿಕೆಯನ್ನು ಕೊಡಿಸಬೇಕು ಆರೋಗ್ಯ ಮಕ್ಕಳ ಭವಿಷ್ಯಕ್ಕೆ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಕೊಡಿಸಬೇಕು ಇದರಿಂದ ನಿಮ್ಮ ಮಕ್ಕಳಿಗೆ ಬರಬಹುದಾದ ಬಾಲ್ಯದ ಕಾಯಿಲೆಗಳನ್ನು ತಡೆಗಟ್ಟಬಹುದು ಅದಕ್ಕಾಗಿ ಬಿಟ್ಟುಹೋದ ಮಕ್ಕಳಿಗೆ ತಪ್ಪದೇ ಲಸಿಕೆ ಮಾಡಿಸಿ ಮಾಡಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನದಲ್ಲಿ ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ತಪ್ಪದೇ ಲಸಿಕೆಗಳನ್ನು ಕೊಡಿಸಿ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವರಾಧ್ಯ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಕೆ. ಗುಂಡಯ್ಯ ನಾಯಕ ಶಿಕ್ಷಕಿಯರಾದ ಲಕ್ಷ್ಮೀ, ಲತಾ, ಅತಿಥಿ ಶಿಕ್ಷಕಿಯಾದ ಉಮಾದೇವಿ, ಸಾವಿತ್ರಿ, ಮಂಗಮ್ಮ,ವಿದ್ಯಾರ್ಥಿಗಳು ಅಂಗನವಾಡಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.