
ಮಂಗಳೂರು, ಮಾ.೨೬- ದೇಶದಲ್ಲಿ ೫ ಸಾವಿರ ಜೈವಿಕ ಅನಿಲ ಉತ್ಫಾದನಾ ಘಟಕಗಳನ್ನು ಆರಂಭಿಸುವ ಗುರಿ ಹೊಂದಿರುವುದಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವೀಡಿಯೋ ಸಂದೇಶ ಮೂಲಕ ತಿಳಿಸಿದ್ದಾರೆ.
ಆಹಾರ ಮತ್ತು ತರಕಾರಿ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿ ಘಟಕದ ಉದ್ಘಾಟ ನಾ ಸಮಾರಂಭ ಮತ್ತು “ಮೈರೆ ಟೆಕ್ನಿ ಮಾಂಟ್ ಸೆಂಟರ್ ಫಾರ್ ರೀಸರ್ಚ್ ಆನ್ ವೇಸ್ಟ್ ರೀಸೈಕ್ಲಿಂಗ್ ಆ?ಯಂಡ್ ಸರ್ಕ್ಯೂಲರ್ ಎಕಾನಮಿ” ಒಪ್ಪಂದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರತಿನಿಧಿಸಿ ಎನ್ಐಟಿಕೆ ಸಭಾಂಗಣದ ವರ್ಚುವಲ್ ವೇದಿಕೆಯ ಮೂಲಕ ಮಾತನಾಡುತ್ತಿದ್ದರು. ಭಾರತ ಹಾಗೂ ಇಟೆಲಿಯ ಸಂಸ್ಥೆ ಜೈವಿಕ ಅನಿಲ ಉತ್ಪಾದನೆ ಯ ಘಟಕವನ್ನು ಆರಂಭಿಸಲು ಕೈ ಜೋಡಿಸಿರುವುದು ಚಾರಿತ್ರಿಕವಾದ ಮಹತ್ವದ ಘಟನೆಯಾಗಿದೆ ಇಂದನ ಕ್ಷೇತ್ರದ ಸ್ವಾವಲಂಬನೆಯ ನಿಟ್ಟಿನಲ್ಲಿ ಜೈವಿಕ ಇಂಧನ ಅಭಿವ್ರದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಶುಭ ಹಾರೈಸಿದರು. ನೈಸರ್ಗಿಕ ಸಂಪನ್ಮೂಲಗಳನ್ನು ಪರಿವರ್ತಿಸುವಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಮೈರೆ ಟೆಕ್ನಿಮಾಂಟ್ ಸಮೂಹ ಸುರತ್ಕಲ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ) ಕ್ಯಾಂಪಸ್ನಲ್ಲಿ ಜೈವಿಕ ತ್ಯಾಜ್ಯ ಪುನರ್ಬಳಕೆಯ ಪೈಲಟ್ ಘಟಕವನ್ನು ಆರಂಭಿಸಿದೆ, ಈ ಯೋಜನೆಗೆ ಟೆಕ್ರಿಮಾಂಟ್ ಅಂಗಸಂಸ್ಥೆ ಸಮೂಹದ ಲಿಮಿಟೆಡ್ (ಟಿಸಿಎಂಪಿಎಲ್)ನ ಭಾರತೀಯ ಭಾಗವಾದ ಉದ್ಯಮ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯಡಿ ಹಣಕಾಸು ನೆರವು ನೀಡುತ್ತಿದೆ ಎಂದು ಮೈರೆ ಟೆಕ್ನಿಮಾಂಟ್ ಅಧ್ಯಕ್ಷ ಫ್ಯಾ ಬ್ರಿಝಿಯೋ ಡಿ ಅಮಾಟೋ ತಿಳಿಸಿದ್ದಾರೆ. ಸುಸ್ಥಿರ ಅಭಿವ್ರದ್ಧಿಯ ನಿಟ್ಟಿನಲ್ಲಿ ಈ ರೀತಿಯ ಒಡಂಬಡಿಕೆ ಭಾರತ ಮತ್ತು ಇಟೆಲಿಯ ನಡುವೆ ನಡೆದ ಒಪ್ಪಂದ ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಎನ್ಐಟಿಕೆ ನಿರ್ದೇಶಕ ಕರಣಂ ಉಮಾಮಹೇಶ್ವರ ರಾವ್,ಪ್ರೊ.ಪಾಂಡು ರಂಗ ವಿಠಲ,ಎಸ್ .ಎಂ.ಕುಲಕರ್ಣಿ, ಮನಪಾ ಜಂಟಿ ಆಯುಕ್ತ ಡಾ. ಜಿ. ಸಂತೋಷ್ ಕುಮಾರ್, ಮೈರೆ ಟೆಕ್ನಿಮಾಂಟ್ ಸಮೂಹದ ಆಡಳಿತ ನಿರ್ದೇಶಕ ಫಿರೋ ಬ್ರೆಟ್ಟೋ ಫೆಲ್ಝಿರೋ, ಉಪಾಧ್ಯಕ್ಷ ಮಿಲಿಂದ್ ಬ್ರೈಡ್, ಎನ್ಐಟಿಕೆ ಉಪ ನಿರ್ದೇಶಕ ಅನಂತನಾರಾಯಣ,ಎನ್ ಐಟಿ ಕೆ ಬಯೋಗ್ಯಾಸ್ ಯೋಜನೆಯ ಸಂಯೋ ಜಕರಾದ ಸಂತೋಷ್ ಬಾಬು, ವಾಸುದೇವ ಎಂ ಮೊದಲಾದ ವರು ವರ್ಚುವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.