ಸಿರವಾರ,ಏ.ಂ೨- ಎರಡು ದಶಕದ ಆಡಳಿತಕ್ಕೂ ೫ ವರ್ಷದ ಆಡಳಿತಕ್ಕೂ ತುಲನೆ ಬೇಡ, ೫ ವರ್ಷದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು, ಪಂಚರತ್ನ ಯೋಜನೆಯನ್ನು ಕಾರ್ಯಕರ್ತರು ಮತದಾರರಿಗೆ ತಿಳಿಸಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಗೆ ಶ್ರಮಿಸಿ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ವಾರ್ಡ್ ನಂ. ೧೧- ೧೪ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತಿಸಿ ನಂತರ ಮಾತನಾಡಿದ ಅವರು, ಸಿರವಾರ ತಾಲೂಕ ಹಾಗೂ ಪಟ್ಟಣಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯವಾಗಿದೆ. ನಾನು ಶಾಸಕರಾದ ನಂತರ ಮುಖ್ಯರಸ್ತೆಯ ಡಿವೈಡರ್, ಸ್ಟ್ರೀಟ್ ಲೈಟ್, ಪ.ಪಂಚಾಯತಿ ಕಟ್ಟಡ, ಬಸ್ ನಿಲ್ದಾಣ, ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ ನೀಡಿದ್ದೇನೆ.
ರೈತರಿಗೆ ಎರಡು ಬೆಳೆ ಬೆಳೆಯಲು ನೀರು ಹರಿಸಿರುವೆ. ನಮ್ಮದೆ ಸರ್ಕಾರ ಇಲ್ಲದೆ ಇದರೂ ೫ ವರ್ಷದಲ್ಲಿ ಇಷ್ಟು ಕೆಲಸ ಮಾಡಿರುವೆ. ೨ ದಶಕದ ಆಡಳಿತಕ್ಕೂ, ೫ ವರ್ಷದ ಆಡಳಿತಕ್ಕೂ ತುಲನೆ ಬೇಡ. ಕಾರ್ಯಕರ್ತರು, ಮುಖಂಡರು ಇಂತಹ ಅಭಿವೃದ್ದಿ ಕಾರ್ಯಗಳನ್ನು, ನಮ್ಮ ನಾಯಕರಾದ ಕುಮಾರಸ್ವಾಮಿಯವರು ಜಾರಿಗೆ ತರಲು ಉದೇಶಿಸಿರುವ ಪಂಚರತ್ನ ಯೋಜನೆಯನ್ನು ಮತದಾರರಿಗೆ ತಲುಪಿಸಿ ಅದಿಕ ಮತಗಳ ಅಂತರದಿಂದ ಗೆಲುವಲ್ಲಿ ಸಹಕರಿಸಿದರೆ ಮಿನಿ ವಿಧಾನ ಸೌಧ, ಕ್ರೀಡಾಂಗಣ, ಶಾಶ್ವತ ಕುಡಿಯುವ ನೀರು ಕೆರೆ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಬಲ್ಲಟಗಿ, ಹಿರಿಯ ಮುಖಂಡ ಜಿ.ಲೋಕರೇಡ್ಡಿ, ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ರಾಜಾ ರಾಮಚಂದ್ರನಾಯಕ, ನಾಗರಾಜ ಬೋಗಾವತಿ, ಜೆಡಿಎಸ್ ಹಿಂದುಳಿದ ವರ್ಗಗಳ ಅದ್ಯಕ್ಷ ಜಂಬುನಾಥಯಾದವ್‌ಅಮರೇಶ ಸಾಹುಕಾರ ಚಾಗಭಾವಿ, ಆದರ್ಶನಾಯಕ, ಸುಬ್ಬಾರಾವ್, ರಾಮಚಾರಿ, ವಲಿ ಸಾಬ ಗುತ್ತೆದಾರ, ಬಂದೇನವಾಜ್, ನಾಗರಾಜ, ಗ್ಯಾನಪ್ಪ, ಸೂಗುರೇಶ ಗಣದಿನ್ನಿ, ದಾನಪ್ಪ, ಚಂದ್ರಶೇಖರ ಯಲ್ದರ್ತಿ,ಯಲ್ಲಪ್ಪದೊರೆ, ಸತ್ತರ ಸಾಬ್, ಇಸ್ಮಾಯಿಲ್, ರಾಜೇಶ ನವಲಕಲ್ ಸೇರಿದಂತೆ ಇನ್ನಿತರರು ಇದ್ದರು.