೫ ಲಕ್ಷ ವೆಚ್ಚದ ಸೇವಲಾಲ್ ಭವನ ನಿರ್ಮಾಣಕ್ಕೆ ಆರ್‌ವಿಎನ್ ಚಾಲನೆ

ಸಿರವಾರ,ಮಾ.ಂ೨- ಚುನಾವಣೆ ಸಂದರ್ಭದಲ್ಲಿ ತಾಂಡದ ನಿವಾಸಿಗಳು ಭವನ ನಿರ್ಮಾಣ ಮಾಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎರಡು ಸೇವಾಲಾಲ್ ಭವನ ನಿರ್ಮಾಣ ಮಾಡಲಾಗುವುದು ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲ್ಲೂಕಿನ ನಾರಬಂಡ ತಾಂಡದಲ್ಲಿ ಹಾಗೂ ವಡವಟಿ ತಾಂಡದಲ್ಲಿ ೨೦೨೧-೨೨ ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಲಾ ಒಂದು ಸೇವಾಲಾಲ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮಾನವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಮಾತನಾಡಿದ ಬಂಜಾರ ಸಮಾಜದವರು ಎಲ್ಲಾ ಜಾತಿ ಜನಾಂಗದವರ ಜೊತೆಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದೇನೆ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬರುವಂತ ಎಲ್ಲಾ ತಾಂಡಗಳಲ್ಲಿ ಒಂದೊಂದು ಸೇವಾಲಾಲ ಭವನಗಳನ್ನು ನಿರ್ಮಾಣ ಮಾಡಿ ಬಂಜಾರ ಸಮಾಜದವರಿಗೆ ಅನುಕೂಲ ಮಾಡಿ ಕೊಟ್ಟಿದ್ದೇನೆ.
ಜಾತಿ ಜಾತಿ ನಡುವೆ ಜಗಳ, ಕಲಹ ಸೃಷ್ಠಿ ಮಾಡಿಲ್ಲ. ಶಾಂತರಿತಿಯಲ್ಲಿದಿರಿ ನೀವು ಕಚ್ಚಾಡಿ, ಜಗ್ಗಳ ಆಡಿ ಠಾಣೆಯ ಮೆಣ್ಣಲು ಏರದಂತಡ ಮಾಡಿರುವೆ. ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಿಗಿ, ಜಿ.ಲೋಜರೆಡ್ಡಿ, ಪರಮೇಶನಾಯ್ಕ್ ಮಾತನಾಡಿದರು.
ರಾಜಾ ಆದರ್ಶ ನಾಯಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಎಮ್.ಡಿ ವಲೀ, ದೇವರಾಜ ನಾಯಕ, ಖಾಜಾ ಸಾಬ್ ಕವಿತಾಳ, ರಾಮಚಾರಿ, ವೆಂಕನಗೌಡ, ಇಸ್ಮಾಯಿಲ, ರಪೀ, ಸಾತ್ತರ್, ಗೋಪಾಲ ನಾಯಕ ಹರವಿ, ಮೌಲ ಸಾಬ್, ಬಾಬು ನಾರಬಂಡ, ರಂಗನಾಥ ನಾಯಕ, ಸಂತೋಷ ನಾರಬಂಡ, ಪೂನ್ನಪ್ಪ ರಾಥೋಡ್, ಗ್ಯಾನಪ್ಪ ಜಾದವ್, ವೆಂಕಟೇಶ ಪವಾರ್, ಪಕ್ಷದ ಮುಂಖಡರು ಕಾರ್ಯಕರ್ತರು ಉಪಸ್ಥಿತರಿದ್ದರು.