೫ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ

ರಾಯಚೂರು,ಜ.೧೭-ಲಿಟಲ್ ರೈಸಿಂಗ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಯರಗೇರಾ ೫ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಸಸ್ಯಗೆ ನೀರನ್ನು ಹಾಕುವುದರ ಮುಖಾಂತರ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರಾದ ಮಹಮ್ಮದ್ ನಿಜಾಮುದ್ದೀನ್, ಪೃಥ್ವಿರಾಜ್ ಎನ್ (ಯರಗೇರಾ ವಲಯದ ಸಿ.ಆರ್.ಪಿ) ಗಂಗಾಧರ್ ಪಾಟೀಲ್, ರವಿ ಗೋನಾಳ್ (ಗುಸ್ಮಾ ಅಧ್ಯಕ್ಷರು), ರವಿ ಭೂಷಣ್ ನರಸಪ್ಪ ಮಹಬೂಬ್ ಕೃಷ್ಣಾರೆಡ್ಡಿ, ಶಾಹೀದ್ ಪಟೇಲ್ ಎಲ್.ಆರ್. ಎಸ್ ಸಂಸ್ಥೆಯ ಕಾರ್ಯದರ್ಶಿ, ಮೋಹನ್ ಪಾಷಾ ಎಲ್.ಆರ್.ಎಸ್ ಸಂಸ್ಥೆಯ ಖಜಾಂಚಿ ಇತರರು ಉಪಸ್ಥಿತರಿದ್ದರು. ಮೊಹಮ್ಮದ್ ನಿಜಾಮುದ್ದೀನ್ ಸರ್ ಅವರು ಶಾಲೆಯ ಅಭಿವೃದ್ಧಿಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅದೇ ರೀತಿ ರವಿ ಕೊನಾಳ್ ಅವರು ಸಹ ಮಕ್ಕಳ ಅಭಿವೃದ್ಧಿ ಮತ್ತು ಮಕ್ಕಳ ನೃತ್ಯವನ್ನು ನೋಡಿ ಹರ್ಷವನ್ನು ವ್ಯಕ್ತಪಡಿಸಿದರು ಇನ್ನು ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ಪಾಲಕರು ಸಹ ಭಾಗಿಯಾಗಿದ್ದರು.