೫ ಎ ಕಾಲುವೆಗೆ ಕಾಂಗ್ರೆಸ್ ಆದ್ಯತೆ

ದಲಿತ ವಿರೋಧಿ ಬಿಜೆಪಿ ಸರ್ಕಾರ – ದೃವ ನಾರಾಯಣ
ಸಿಂಧನೂರು ಮಾ.೩೧-ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಎಸ್.ಸಿ, ಎಸ್.ಟಿ. ಜನಾಂಗಕ್ಕೆ ನೀಡಿದ್ದ ಅನುದಾನವನ್ನು ರಾಜ್ಯ ಬಿಜೆಪಿ ಸರ್ಕಾರ ಕಡಿತಗೊಳಿಸಿ ದಲಿತ ವಿರೋಧಿ ನೀತಿ ಅನುಸರಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯ ಅಧ್ಯಕ್ಷರಾದ ದೃವ ನಾರಾಯಣ ಬಿಜೆಪಿ ಪಕ್ಷ ಹಾಗೂ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ನಗರದಲ್ಲಿ ಮಾದಿಗ ಮತ್ತು ಚಲುವಾದಿ ಸಮಾಜದ ಮುಖಂಡರ ನೇತೃತ್ವದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಎಸ್.ಸಿ, ಎಸ್.ಟಿ ಜನರಿಗೆ ಹೆಚ್ಚು ಅನುದಾನ ನೀಡಿದ್ದು, ಈಗಿನ ಬಿಜೆಪಿ ಸರ್ಕಾರ ಅನುದಾನವನ್ನು ಕಡಿತ ಮಾಡಿ ದಲಿತ ವಿರೋಧಿಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದೂಳಿದ ವರ್ಗಗಳಿಗೆ ನೀಡಿದ ನಿಗಮಗಳ ಸಾಲವನ್ನು ಮನ್ನಾ ಮಾಡಿದ್ದು ಅಲ್ಲದೆ ಎಸ್.ಸಿ ,ಎಸ್.ಟಿ ಜನಾಂಗಕ್ಕೆ ೩೦ ಸಾವಿರ ಕೋಟಿ ಅನುದಾನ ಒಂದು ವರ್ಷಕ್ಕೆ ನೀಡಿದ್ದು, ಈಗಿನ ಬಿಜೆಪಿ ಸರ್ಕಾರ ೩೦ ಸಾವಿರ ಕೋಟಿ ಅನುದಾನ ದಲ್ಲಿ ೪ ಸಾವಿರ ಕೋಟಿ ಅನುದಾನ ಕಡಿತ ಮಾಡಿದೆ. ಅಲ್ಲದೆ ಎಸ್.ಸಿ ,ಎಸ್.ಟಿ ಅನುದಾನವನ್ನು ಬೇರೆ ಇಲಾಖೆಗಳಿಗೆ ಬಳಸಿಕೊಳ್ಳುತ್ತಿರುವದು ನೋಡಿದರೆ ಇವರಿಗೆ ನಿಜವಾಗಿ ಎಸ್.ಸಿ ,ಎಸ್.ಟಿ ಜನಾಂಗದ ಬಗ್ಗೆ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ೭.೫% ಮಿಸಲಾತಿ ಜಾರಿಗೆ ತರುವದಾಗಿ ಹೇಳಿದ್ದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಇಲ್ಲಿತನಕ ಯಾಕೆ ಮಿಸಲಾತಿ ತರಲು ಆಗಿಲ್ಲ. ಈಗ ಮಸ್ಕಿ ಉಪಚುನಾವಣೆಯಲ್ಲಿ ಮೀಸಲಾತಿ ತರಲು ನಾನು ಸಿದ್ದ ರಕ್ತದಲ್ಲಿ ಬರೆದುಕೊಡುವದಾಗಿ ಸಮಾಜದ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಮತ ಪಡೆಯುತ್ತಿದ್ದಾರೆ. ರಾಮುಲು ಮಾತಿಗೆ ಮರಳಾಗದೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ ಪಕ್ಷಾಂತರಿ ಪ್ರತಾಪ್ ಪಾಟೀಲರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರವಿಹಾಳಗೆ ಮತ ನೀಡಿ ಗೆಲ್ಲಿಸಬೇಕೆಂದರು.
ಬಿಜೆಪಿ ಪಕ್ಷದ ಮುಖಂಡರುಗಳು ಯಾವುದೇ ಜನ ಪರ ಯೋಜನೆಗಳನ್ನು ಜಾರಿಗೆ ತರದೆ ಬರಿ ಬಣ್ಣದ ಮಾತಿನಲ್ಲಿ ಮರಳು ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ. ಇವರಿಗೆ ಬದ್ದತೆ ಎಂಬುವದಿಲ್ಲ ಕಾಂಗ್ರೆಸ್ ಪಕ್ಷ ೩೭೧ ಜಾರಿಗೆ ತಂದು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಕೊಡುಗೆ ನೀಡಿದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ ನಾಯಕ ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರು, ಎಸ್.ಸಿ, ಎಸ್.ಟಿ ಜನಾಂಗ ಸೇರಿದಂತೆ ಎಲ್ಲಾ ವರ್ಗಗಳ ಜನರಿಗೆ ಜನಪರ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಕೆಲಸ ಮಾಡಿದ್ದು ಬಿಜೆಪಿ ಪಕ್ಷ ಅಧಿಕಾರ ಹಾಗೂ ಹಣಕ್ಕಾಗಿ ಜನರ ಅಭಿವೃದ್ಧಿ ಮರೆತು ರಾಜಕೀಯ ಮಾಡುತ್ತಿದ್ದು ಪ್ರಧಾನಿ ಮೋದಿ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡಿದರೆ, ರಾಜ್ಯ ಬಿಜೆಪಿ ಸರ್ಕಾರ ದಲಿತ ವಿರೋಧಿ ಯಾಗಿದ್ದು ಮಾದಿಗ ಮತ್ತು ಚಲುವಾದಿ ಸಮಾಜ ಒಟ್ಟಾಗಿ ಒಕ್ಕಟ್ಟಿನಿಂದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಪಾಟೀಲನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳರನ್ನು ಗೆಲ್ಲಿಸಲು ಪಣ ತೊಟ್ಟಿರುವದಕ್ಕೆ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದ ಅವರು ಸಾಮಾಜಿಕ ನ್ಯಾಯ ಹಾಗೂ ಕ್ರಾಂತಿಕಾರಿ ಬದಲಾವಣೆಗಳಿಗಾಗಿ ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಬಿ.ವಿ ನಾಯಕ ಮನವಿ ಮಾಡಿಕೊಂಡರು.
ಮಾಜಿ ಸಚಿವರಾದ ಹನ್ಮಂತಪ್ಪ ಆಲ್ಕೊಡ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ಯಾದ ವಸಂತಕುಮಾರ, ಮುಖಂಡರಾದ ಹನಮಂತಪ್ಪ ಮುದ್ದಾಪುರ, ಖಾಜಿ ಮಲ್ಲಿಖ್, ಎಚ್.ಎನ್.ಬಡಿಗೇರ, ಪಾಮಯ್ಯ ಮುರಾರಿ, ಶೇಖರಪ್ಪ ಗಿಣಿವಾರ, ಅಲ್ಲಂ ಪ್ರಭು ಪೂಜಾರಿ, ರಾಮಣ್ಣ, ನರಸಪ್ಪ ಕಟ್ಟಿಮನಿ, ಹನುಮಂತ ಗೋಮರ್ಸಿ, ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.