೫೩೪ ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ

ರಾಯಚೂರು,ಅ.೨೮- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೫೩೪ ನೇ ದಿನಕ್ಕೆ ಮುಂದುವರೆದಿದೆ.
ವಿಶೇಷ ಸ್ಥಾನಮಾನಕೊಳಪಟ್ಟ ಐಐಟಿ ಇಂದ ವಂಚಿತಗೊಂಡ ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಡಾ. ಬಸವರಾಜ್ ಕಳಸ ,ಅಶೋಕ್ ಕುಮಾರ್ ಜೈನ್ , ಕಾಮರಾಜ ಪಾಟೀಲ್, ಜಾನ್ ವೆಸ್ಲಿ, ನರಸಪ್ಪ ಬಾಡಿಯಾಲ್, ಡಾ.ಎಸ್.ಎಸ್ ಪಾಟೀಲ್ , ಜಗದೀಶ್ ಪೂರತಿಪ್ಪಲಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ಗುರುರಾಜ್ ಕುಲಕರ್ಣಿ, ವೀರಭದ್ರಯ್ಯ ಸ್ವಾಮಿ, ಮಹೀಂದ್ರ ಸಿಂಘ್ , ವೀರೇಶ್ ಬಾಬು, ಮಾರೆಪ್ಪವಕೀಲರು, ಚಂದ್ರಶೇಕರ್ ಭಂಡಾರಿ, ಚಾಂದ್ ಪಾಷಾ ಶಕ್ತಿನಗರ, ಬಾಬು ಕವಿತಾಳ ಮುಂತಾದವರು ಭಾಗವಹಿಸಿದ್ದರು.