೫೦ ಲಕ್ಷ ರೂಗಳ ಕಾಮಗಾರಿಗಳಿಗೆ ಶಾಸಕ ಶರತ್ ಚಾಲನೆ

ಹೊಸಕೋಟೆ, ಸೆ.೨೧- ಲಕ್ಕೊಂಡಹಳ್ಳಿ ಪಂಚಾಯ್ತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಸುಮಾರು ೫೦ ಲಕ್ಷಗಳ ವೆಚ್ಚದ ವಿವಿದ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಶಂಕುಸ್ಥಾಪನೆ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ತಿಮ್ಮಸಂದ್ರ ಗ್ರಾಮದಲ್ಲಿ ೧೪-೧೫ ನೇ ಹಣಕಾಸು ಯೋಜನೆ ಅಡಿಯಲ್ಲಿ ಸೋಲಾರ್, ಲೈಟ್‌ಗಳ ಉದ್ಘಾಟನೆ, ಕಲ್ಯಾಣಿ ಹಾಗು ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿಕಲ ಚೇತನರಿಗೆ ತ್ರಿಚಕ್ರ ವಾಹನ ಕೊಡುಗೆ, ಹಾಗು ಪಂಚಾಯ್ತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಿದ್ದೇವೆ ಎಂದರು.
ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಈಗಾಗಲೆ ಜಾತಿವಾರು ಪಟ್ಟಿಯನ್ನು ಬಿಡುಗಡೆಯಾಗಿದ್ದು ಮುಂದಿನ ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲು ಎಲ್ಲಾ ಸಿದ್ದತೆಗಳು ಕಂಡುಬರುತ್ತಿವೆ ಎಲ್ಲರಿಗೂ ಸಮನಾಗಿ ಜನ ಸೇವೆ ಮಾಡುವಂತ ಅಭ್ಯರ್ಥಿಗಳನ್ನು ಈಗಾಗಲೆ ಸೂಚಿಸಿದ್ದು ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅದ್ಯಕ್ಷ ಸಿ,ಮುನಿಯಪ್ಪ, ಬಿಡಿಸಿಸಿ ಮಾಜಿ ನಿರ್ದೇಶಕರಾದ ತಮ್ಮೇಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಡಾ|| ಡಿ,ಟಿ,ವೆಂಕಟೇಶ್, ಗ್ರಾಮ ಪಂಚಾಯ್ತಿ ಮಾಜಿ ಅದ್ಯಕ್ಷ ಪ್ರಭಾಮಂಜುನಾಥ್, ಉಪಾದ್ಯಕ್ಷರಾಧ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಸದಸ್ಯರಾಧ ಬೈರಪ್ಪ, ಬೈರೇಗೌಡ, ಮಾಜಿ ಉಪಾದ್ಯಕ್ಷರಾಧ ಭಾರತೇಗೌಡ, ಎಂಪಿಸಿಎಸ್ ಅದ್ಯಕ್ಷರಾಧ ನಟರಾಜ್, ಮುಖಂಡರಾದ ನಾರಾಯಣಗೌಡ, ಅಂಬರೀಶ್, ಹಾಗು ಇತರೆ ಮುಖಂಡರು ಹಾಜರಿದ್ದರು.
೧೯ ಹೆಚ್,ಎಸ್,ಕೆ,೦೧
ಲಕ್ಕೊಂಡಹಳ್ಳಿ ಪಂಚಾಯ್ತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಸುಮಾರು ೫೦ ಲಕ್ಷಗಳ ವೆಚ್ಚದ ವಿವಿದ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಶಂಕುಸ್ಥಾಪನೆ ಮಾಡಿದರು,