ರಾಯಚೂರು,ಅ.೩- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೫೦೮ನೇ ದಿನಕ್ಕೆ ಕಾಲಿಟ್ಟಿದೆ ಹಿಂದುಳಿದ ಮಹತ್ವಾಕಾಂಕ್ಷಿ ಜಿಲ್ಲೆ, ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಮಹಾತ್ಮ ಗಾಂಧಿ ಜಯಂತಿಯಂದು ಏಮ್ಸ್ ಹೋರಾಟ ಸಮಿತಿಯ ವೆಂಕಟರೆಡ್ಡಿ ದಿನ್ನಿ ಯವರು ಮಹಾತ್ಮ ಗಾಂಧಿ ವೇಷ ಧರಿಸಿ ರಾಯಚೂರಿಗೆ ಏಮ್ಸ್ ಬೇಕೇ ಬೇಕು ಎಂದು ಬಿತ್ತಿ ಪತ್ರವನ್ನು ಹಿಡಿದು ಗಮನ ಸೆಳೆದರು. ಇಂದು ನಡೆದ ಧರಣಿ ಸತ್ಯಾಗ್ರಹಕ್ಕೆ ಜನ ಸೇವಾ ಟ್ರಸ್ಟ್ ಸಂಘಟನೆಯ ಅಧ್ಯಕ್ಷ ಟಿ .ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿ ಜೆ.ಎಲ್ ಗೋಪಿ ಗೌರವ ಸಲಹೆಗಾರರಾದ ಎ. ರಾಮುಲು, ಜೆ .ರಾಮಪ್ಪ, ಪದಾಧಿಕಾರಿಗಳಾದ ಜಿ.ಟಿ ಮಂಜುನಾಥ್, ಭೀಮಸೇನ್, ಜಿ.ಎ ವೆಂಕಟೇಶ್ ,ಟಿ .ಜಗದೀಶ್, ಪಿ ನರಸಿಂಹಲು, ಜೆ.ಟಿ ಈರಣ್ಣ ,ಟಿ. ಮಲ್ಲಿಕಾರ್ಜುನ, ಶಿವಪ್ರಸಾದ್, ವೀರೇಶ್ ಉಟ್ಕೂರ್ ,ಯಶವಂತ ಕುಮಾರ್ ಜಗಲಿ ಮುಂತಾದವರು ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಪರವಾಗಿ ವಿಶೇಷ ಅಧಿಕಾರಿಗಳಿಗೆ ಸಲ್ಲಿಸಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲೇಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸೋಷಿಯಲಿಸ್ಟ್ ಟ್ರೇಡ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಶಫಿ ಮತ್ತು ಸಂಗಡಿಗರು ಏಮ್ಸ್ ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದ್ದರು .ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶ್ ಗದಾರ್ ಭಾಗವಹಿಸಿದ್ದರು .
ಏಮ್ಸ್ ಹೋರಾಟ ಸಮಿತಿಯ ಡಾ .ಬಸವರಾಜ್ ಕಳಸ ,ಅಶೋಕ್ ಕುಮಾರ್ ಜೈನ್, ಎನ್ ಮಹಾವೀರ್ ,ನರಸಪ್ಪ ಬಾಡಿಯಾಳ್, ಡಾ .ಎಸ್ .ಎಸ್ ಪಾಟೀಲ್, ವೆಂಕಯ್ಯ ಶೆಟ್ಟಿ ಹೊಸಪೇಟೆ ,ಜಸವಂತರಾವ್ ಕಲ್ಯಾಣ ಕಾರಿ, ಕಾಮರಾಜ ಪಾಟೀಲ್, ಗುರುರಾಜ್ ಕುಲಕರಣಿ, ಪರಶುರಾಮ ,ವೀರೇಶ್ ಬಾಬು, ರಮೇಶ್ ರಾವ್ ಕಲ್ಲೂರ್ಕರ್, ಬಸವರಾಜ್ ಮಿಮಿಕ್ರಿ, ನಾಸೀರ್ ಹೊಸೂರ್, ಆಂಜನೇಯ ಜಾಲಿಬೆಂಚಿ, ಪ್ರಸನ್ನ ಆಲಂಪಲ್ಲಿ, ಪ್ರಭು ನಾಯಕ್, ಉದಯ್ ಕುಮಾರ್, ಬಸವರಾಜ್, ಅಜೀಜ್ , ಸಚಿತ್, ಮೆಹಬೂಬ್ , ಬಾಬು ಕವಿತಾಳ್ ಮುಂತಾದವರು ಭಾಗವಹಿಸಿದ್ದರು.