೫೦೧ ಕವಿಗಳಿಂದ ೨೧ ನಿಮಿಷಗಳಲ್ಲಿ ಕವನ ರಚನೆ

ಆನೇಕಲ್. ಫೆ. ೨೮- ಬನ್ನೇರುಘಟ್ಟದ ಶ್ರೀ ಸಾಯಿ ಸದ್ಬಾವನಾ ಶಾಲಾ ಆವರಣದಲ್ಲಿ ಜನಸಿರಿ ಪೌಂಡೇಷನ್ ಮುಖ್ಯಸ್ಥರಾದ ಜಿಗಣಿ ನಾಗಲೇಖರವರ ನೇತೃತ್ವದಲ್ಲಿ ಕನ್ನಡ ನಾಡಿನ ಹಿರಿಮೆ ಗರಿಮೆಯ ಕುರಿತಂತೆ ೫೦೧ ಕವಿಗಳಿಂದ ಏಕ ಕಾಲದಲ್ಲಿ ೨೧ ನಿಮಿಷಗಳಲ್ಲಿ ಕವನ ರಚಿಸುವ ಅದ್ದೂರಿ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಕರುನಾಡ ಕವಿಗಳ ಸಂಭ್ರಮ ಮತ್ತು ಕವಿಗಳಿಗೆ ಕವಿ ಪ್ರೇರಣಾ ಪ್ರಶಸ್ಥಿ ವಿತರಣೆ ಮತ್ತು ಸಾಧಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೇಲಿ ಮಠದ ಶ್ರೀಗಳು, ಮುತ್ತೇಶ್ವರ ಸ್ವಾಮೀಜಿಗಳು. ರಾಜಾಪುರ ಮಠದ ಡಾ|| ಶಿವಾಚಾರ್ಯ ಮಹಾಸ್ವಾಮಿಗಳು. ಆರ್.ಕೆ.ರಮೆಶ್,
ವಿ.ಮನೋಹರ್, ಡಾ||ಡಿ.ಸಿರಾಜಪ್ಪ, ಇನ್ಸ್ ಪೆಕ್ಟರ್ ವಿಶ್ವನಾಥ್, ಆನಂತ್ ಸಿಂಗ್, ಸುಧ ಬರಗೂರ್, ಡಾ|| ಚಿನ್ನಪ್ಪ ಚಿಕ್ಕಹಾಗಡೆ, ಸ್ಪೂರ್ತಿ ಕಾಲೇಜಿನ ಗೋಪಾಲರೆಡ್ಡಿ, ಬೃಂದಾವನ ಶಾಲೆಯ ಶೇಖರ್, ಸೆಂಟ್ ಪಿಲೋನಾಸ್ ರಾಜ್ ಗೋಪಾಲ್. ಇಸ್ರೋದ ವಿಜ್ಷಾನಿ ಚಿದಂಬರ ಕುಲಕರ್ಣಿ, ದಾವಣಗೆರೆ ಸಾಲಿಗ್ರಾಮ ಗಣೇಶ್ ಶಣೈ ಮತ್ತಿತರು ಹಾಜರಿದ್ದರು.