೫೦೦ ಕೋಟಿ ನಕಲಿ ಬಿಲ್ಲಿಂಗ್ ಜಾಲ ಪತ್ತೆ

ನವದೆಹಲಿ,ಅ.೨೭:ದೇಶದ ಸುಮಾರು ೪೨ ಕಡೆಗಳಲ್ಲಿ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಆಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.ನವದೆಹಲಿ ಎನ್ ಸಿಆರ್, ಪಂಜಾಬ್, ಗೋವಾ, ಹರ್ಯಾಣ, ಉತ್ತರಾಖಂಡ್ ರಾಜ್ಯಗಳಲ್ಲಿ ೪೨ ಕಡೆಗಳಲ್ಲಿ ನಡೆದ ದಾಳಿಯಲ್ಲಿ ನಕಲಿ ಬಿಲ್ಲಿಂಗ್ ಜಾಲ ಪತ್ತೆಯಾಗಿದೆ. ಬಿಲ್ಲಿಂಗ್ ಜಾಲದಲ್ಲಿದ್ದ ಎಂಟ್ರಿ ಆಪರೇಟರ್ಸ್, ಮಧ್ಯವರ್ತಿಗಳು, ನಗದು ವಿಲೇವಾರಿದಾರರು, ಫಲಾನುಭವಿಗಳು, ಲೇವಾದೇವಿ ಸಂಸ್ಥೆಗಳ ಮೇಲೆ ದಾಳಿ ನಡೆ ಸಲಾಗಿದೆ.
ಸುಮಾರು ೨.೩೭ ಕೋಟಿ ರು ನಗದು ವಶವಾಗಿದ್ದು, ೨.೮೯ ಕೋಟಿ ರು ಆಭರಣ ಹಾಗೂ ೧೭ ಬ್ಯಾಂಕ್ ಲಾಕರ್ ಜಪ್ತಿ ಮಾಡಲಾಗಿದೆ. ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಈ ನಕಲಿ ಬಿಲ್ಲಿಂಗ್ ದಂಧೆಯಿಂದ ಬರುವ ಹಣವನ್ನು ಅದರಲ್ಲಿ ತೊಡಗಿಸಲಾಗುತ್ತಿತ್ತು. ಡಿಜಿಟಲ್ ಮಾಧ್ಯಮ ಬಳಸಿ
ಕೊಂಡು ಬ್ಯಾಂಕ್ ಅಧಿಕಾರಿಗಳನ್ನು ಈ ಜಾಲದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಈ ದಂಧೆಯಲ್ಲಿ ಬಂದ ಮೊತ್ತವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿರುವುದು ಪತ್ತೆಯಾಗಿದೆ. ಹಲವು ಬ್ಯಾಂಕ್ ಗಳಲ್ಲಿ ಕೋಟ್ಯಂತರ ರುಪಾಯಿ ಠೇವಣಿ ಇಡಲಾಗಿದೆ.