೫೦೦ಕ್ಕೂ ಹೆಚ್ಚು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ರಾಯಚೂರು,ಏ.೧೦- ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವೈ ಮಲ್ಲಾಪೂರ, ದಿನ್ನಿ, ಗಧಾರ, ಗೋಡಿಹಾಳ್, ಉಪ್ರಾಳ, ಯಾಪಲದಿನ್ನಿ, ಕೂಡ್ಲೂರು, ಮನ್ಸಲಾಪೂರು, ಅರಶೀಣಗಿ, ಗುಂಜಳ್ಳಿ, ಮಂಜಾರ್ಲಾ, ಗ್ರಾಮಗಳ ಮುಖಂಡರುಗಳು, ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಮೆಚ್ಚಿ ಇಂದು ಜನಪ್ರಿಯ ಶಾಸಕರು ಶ್ರೀ ಬಸನಗೌಡ ದದ್ದಲ್‌ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶಾಸಕ ಬಸನಗೌಡ ದದ್ದಲ್‌ರವರ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಅವರ ಸರಳತೆಗೆ ಮೆಚ್ಚಿ ಇಂದು ಸೇರ್ಪಡೆ ೫೦೦ಕ್ಕೂ ಹೆಚ್ಚು ಜನರು ಪಕ್ಷಕ್ಕೆ ಸೇರ್ಪಡೆಗೊಂಡರು, ಇದರಿಂದ ಗ್ರಾಮೀಣ ಕ್ಷೇತ್ರದಲ್ಲಿ ಬಸನಗೌಡ ದದ್ದಲ್‌ರವರ ಕೈ ಬಲಪಡಿಸಿದ್ದಂತಾಗಿದೆ.