೫ಜಿ ತರಂಗಾಂತರಕ್ಕೆ ಅದಾನಿ- ಅಂಬಾನಿ ಪೈಪೋಟಿ

ನವದೆಹಲಿ,ಜು.೨೬- ದೇಶದಲ್ಲಿ ಐದನೇ ತಲೆಮಾರಿನ ತರಂಗಾಂತರ ಹಂಚಿಕೆ ಪರವಾನಗಿ ಪಡೆದುಕೊಳ್ಳಲು ದೇಶದ ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವೆ ಭಾರೀ ಪೈಪೋಟಿ ಕಂಡು ಬಂದಿದೆ.
ಡಿಜಿಟಲ್ ಯುಗದಲ್ಲಿ ಪ್ರಾಬಲ್ಯ ಸಾಧಿಸಲು ಈ ಇಬ್ಬರೂ ಘಟಾನುಘಟಾನಿಗಳು ಇನ್ನಿಲ್ಲದ ಹರ ಸಾಹಸ ನಡೆಸಿದ್ದಾರೆ. ಈ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರು ಎನ್ನುವುದು ಕುತೂಹಲದ ಸಂಗತಿ ೫ಜಿ ತರಾಗಂತವನ್ನು ತಮ್ಮದಾಗಿಸಿಕೊಳ್ಳಲು ಈ ಇಬ್ಬರು ಶ್ರೀಮಂತರು ಮುಂದಾಗಿದ್ದು ೫ ಜಿ ಹಕ್ಕುಗಳಿಗಾಗಿ ೧೪ ಶತಕೋಟಿ ಡಾಲರ್ ಬಿಡ್ ಮಾಡಿದ್ದಾರೆ ಎನ್ನಲಾಗಿದೆ.
ಅಂಬಾನಿಯವರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅತ್ಯಧಿಕ ಪೂರ್ವ-ಹರಾಜು ಠೇವಣಿ ಹಣಪಾವತಿಸಿದೆ, ಇಂದಿನಿಂದ ಪ್ರಾರಂಭವಾಗುವ ಮಾರಾಟದಲ್ಲಿ ಅತ್ಯಂತ ಆಕ್ರಮಣಕಾರಿ ಬಿಡ್‌ದಾರರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಅಚ್ಚರಿಯ ಪ್ರವೇಶದಾರ ಅದಾನಿ ಡೇಟಾ ನೆಟ್‌ವರ್ಕ್ಸ್ ಲಿಮಿಟೆಡ್ ಕೂಡ ಹರಾಜಿನಲ್ಲಿ ಭಾಗಿಯಾಗಲಿದ್ದು ಟೆಲಿಕಾಂ ತರಾಂಗತರ ತಮ್ಮದಾಗಿಸಿಕೊಳ್ಳಲು ಹರಸಾಹಸ ನಡೆದಿದೆ.ಬಿಲಿಯನೇರ್ ಸುನಿಲ್ ಮಿತ್ತಲ್ ನೇತೃತ್ವದ ವೈರ್‌ಲೆಸ್ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್ ಲಿಮಿಟೆಡ್, ಮತ್ತು ಕುಮಾರ ಮಂಗಳಂ ಬಿರ್ಲಾ ನೇತೃತ್ವದ ವೋಡೋ ಪೋನ್ ಗ್ರೂಪ್ ಕೂಡ ಬಿಡ್ ನಲ್ಲಿ ಪಾಲ್ಗೊಳ್ಳಲಿವೆ ಸ್ಥಳೀಯ ರೇಟಿಂಗ್ ಕಂಪನಿ ಐಸಿಆರ್ ಎ ಲಿಮಿಟೆಡ್‌ನ ಜೂನ್ ಅಂದಾಜಿನ ಪ್ರಕಾರ ಏರ್‌ವೇವ್ಸ್ ಮಾರಾಟ ೧.೧ ಟ್ರಿಲಿಯನ್ ರೂಪಾಯಿಗಳಷ್ಟು (೧೪ ಶತಕೋಟಿ ಡಾಲರ್ ) ಸಂಗ್ರಹಿಸಬಹುದು ಎಂದು ಅಂದಾಜು ಮಾಡಲಾಗಿದೆ.. ಈ ವರ್ಷದ ಆರಂಭದಲ್ಲಿ ಅಂಬಾನಿಯನ್ನು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹಿಂದಿಕ್ಕಿದ ಅದಾನಿ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ.೫ಉ ತರಂಗಗಳಲ್ಲಿ ಅದರ ಆಸಕ್ತಿಯು “ಖಾಸಗಿ ನೆಟ್‌ವರ್ಕ್ ಪರಿಹಾರಗಳು” ಮತ್ತು ಸಂಸ್ಥೆಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಸೈಬರ್ ಸುರಕ್ಷತೆ ಹೆಚ್ಚಿಸುವ ಬಗ್ಗೆ, ಪ್ರಸ್ತುತ ಅಂಬಾನಿ ಪ್ರಾಬಲ್ಯ ಹೊಂದಿರುವ ಗ್ರಾಹಕ ಮೊಬೈಲ್ ಜಾಲವನ್ನೂ ಈಗ ಪ್ರವೇಶಿಸಿದ್ದಾರೆ.