೫ಎ ಕಾಲುವೆ ಹೋರಾಟ ಸಂಯುಕ್ತ ವೇದಿಕೆಯ ರೈತರ ಸಂಭ್ರಮಾಚರಣೆ

ಕವಿತಾಳ.ಮೇ.೦೩-ಕವಿತಾಳ ಪಟ್ಟಣ ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ೫ಎ ಕಾಲುವೆ ಹೋರಾಟ ಸಂಯುಕ್ತ ವೇದಿಕೆ ಮುಖಂಡರು ಹಾಗೂ ರೈತರು ಇಂದು ಮಸ್ಕಿ ಉಪಚುನಾವಣೆ ಫಲಿತಾಂಶ ಬಿಜೆಪಿ ಪಕ್ಷದ ಹಿನ್ನಡೆ ಫಲಿತಾಂಶ ಕಂಡು ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯ ಮಾಡಲಾಯಿತು.
೫ಎ ಕಾಲುವೆ ಹೋರಾಟದ ಫಲದಿಂದ ಬಿಜೆಪಿಗೆ ಸೋಲು ಖಚಿತವಾಗುವುದೆಂದು ಸಾರ್ವಜನಿಕ ಕರ ವಲಯದಲ್ಲಿ ಕೇಳಿ ಬರುತ್ತಿತ್ತು.
ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕರಾದ ಆರ್ ಮಾನಸಯ್ಯ, ಖಂಡೋಜಿರಾವ, ಆದೇಶ ನಗನೂರು, ಶಾಂತಮೂರ್ತಿತಾತ ನಾಗಪ್ಪ ತಳವಾರ, ಮಾಲಪ್ಪ ಚಲುವಾದಿ, ತಿಪ್ಪಣ್ಣ ಹೆಸರೂರ ಚಂದುಸಾಬ್, ಶಿವಕುಮಾರ್, ದೊಡ್ಡಪ್ಪ, ಮೌನೇಶ, ಹೂವಪ್ಪ, ರಾಯಪ್ಪ ಹಿರೇಮನಿ, ಬಸವರಾಜ ಕೊಂಡಾಲ, ಗಂಗಪ್ಪ ಕಲ್ಲೂರು, ಹನುಮಂತ ಭೋವಿ, ಬಸವರಾಜ ಜಂಗಮರಹಳ್ಳಿ, ಶಿವಪ್ಪ ಪೂಜಾರಿ, ದುರುಗಣ್ಣ ಜ್ವಾಳದರಾಶಿ, ತಿರುಪತಿ, ಗುಡಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ೫ಎ ಕಾಲುವೆ ಹೋರಾಟದ ರೈತರು ಇದ್ದರು.