೫ಎ ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ಮಸ್ಕಿ ಬಂದ್ ಯಶಸ್ವಿ

ಮಸ್ಕಿ,ಜ.೯- ಈ ಭಾಗದ ರೈತರ ಜೀವನಾಡಿ ೫ಎ ನೀರಾವರಿ ಕಾಲುವೆ ಯೋಜನೆ ಅನುಷ್ಟಾನ ಗೊಳಿಸ ಬೇಕು ಎಂದು ಒತ್ತಾಯಿಸಿ ಕರ್ನಾಟಕ ನೀರಾವರಿ ಹೋರಾಟ ಸಮಿತಿ ಕರೆ ನೀಡಿದ್ದ ಮಸ್ಕಿ ಬಂದ್ ಸಂಪೂರ್ಣ ಯಶಸ್ವಿ ಯಾಯಿತು. ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಅಂಗಡಿ, ಮುಗ್ಗಟ್ಟು ಗಳನ್ನು ಬಂದ್ ಮಾಡಿ ವರ್ತಕರು ರೈತರ ಹೋರಾಟಕ್ಕೆ ಬೆಂಬಲ ನೀಡಿದ ಕಾರಣ ಬಂದ್ ಯಶಸ್ವಿ ಯಾಯಿತು. ಗಾಂಧಿ ನಗರ ಬಳಿಯ ಪ್ರವಾಸಿ ಮಂದಿರ ಬಳಿ ಜಮಾಯಿಸಿದ ನೂರಾರು ರೈತರು ೫ಎ ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ಬ್ರಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು ಅಶೋಕ ವೃತ್ತ, ಖಲೀಲ್ ವೃತ, ಮೇನ್ ಬಜಾರ್, ಕನಕ ವೃತ್ತ ಮೂಲಕ ಮೆರವಣಿಗೆ ಹಳೆ ಬಸ್ ನಿಲ್ದಾಣ ತಲುಪಿತು ಪ್ರತಿಭಟನೆ ರ್‍ಯಾಲಿಯಲ್ಲಿ ಭಾಗವಹಿಸಿದ್ದ ರೈತರು ಯೋಜನೆ ಜಾರಿಗೆ ಒತ್ತಾಯಿಸಿ ಸರಕಾರದ ವಿರುದ್ದ ಘೋಷಣೆ ಮೊಳಗಿಸಿದರು. ಹಳೆ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ಪ್ರತಿಮೆ ಸ್ಥಳ ಬಳಿ ಬಹಿರಂಗ ಸಭೆ ನಡೆಯಿತು ನಾನಾ ರೈತ ಮುಖಂಡರು ೫ಎ ನೀರಾವರಿ ಕಾಲುವೆ ಯೋಜನೆ ಜಾರಿಗೆ ಒತ್ತಾಯಿಸಿದರು ನಾನಾ ಬೇಡಿಕೆಗಳ ಮನವಿ ತಹಸೀಲ್ದಾರ್ ಬಲರಾಂ ಕಟ್ಟಿಮನಿ ಅವರಿಗೆ ಸಲ್ಲಿಸಿದರು ನಾನಾ ಪ್ರಗತಿ ಪರ ಸಂಘಟನೆ ಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದರು ರೈತರ ಹೋರಾಟಕ್ಕೆ ಸಾರ್ವಜನಿಕರು ಕೂಡ ಸಾಥ್ ನೀಡಿದರು. ಸಿಪಿಏ ದೀಪಕ್ ಭೂಸರೆಡ್ಡಿ, ಪಿಎಸ್ ಏ ಸಣ್ಣ ವೀರೇಶ ಬಂದೋಬಸ್ತ್ ಕೈ ಗೊಂಡಿದ್ದರು.