
ಬೆಂಗಳೂರು,ಮಾ.೧೬- ಆರಂಭದಿಂದಲೇ ಪ್ಯಾನ್ ಇಂಡಿಯಾ ಚಿತ್ರ ಎನ್ನುವ ಪ್ರಚಾರದೊಂದಿಗೆ ಆರಂಭವಾಗಿ ಜಾಗತಿಕವಾಗಿ ೪,೫೦೦ ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ತಂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಿತು.
ಕಬ್ಜ ಚಿತ್ರದ ಹಾರ್ಡ್ ಡಿಸ್ಕ್ ಅನ್ನು ತಿಮ್ಮಪ್ಪನ ಸನ್ನಿಧಾನದಲ್ಲಿ ಇಟ್ಟು ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ನಿರ್ಮಾಪಕರು, ನಿರ್ದೇಶಕರೂ ಆಗಿರುವ ಆರ್ ಚಂದ್ರು ಮತ್ತು ತಂಡ ತಿಮ್ಮಪ್ಪನ ಆಶೀರ್ವಾದ ಕೋರಿದ್ದಾರೆ.
ಬೆಳಗ್ಗೆ ವಿಶೇಷ ವಿಮಾನದಲ್ಲಿ ನಿರ್ದೇಶಕ ಆರ್ .ಚಂದ್ರು, ನಾಯಕ ಉಪೇಂದ್ರ ಚಿತ್ರಕ್ಕೆ ಆರಂಭದಿಂದಲೂ ಬೆನ್ನೆಲುಬಾಗಿ ನಿಂತಿರುವ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸೀಕಲ್ ರಾಮಚಂದ್ರೇಗೌಡ ಸೇರಿದಂತೆ ತಂಡ ತಿಮ್ಮಪ್ಪನ ಮುಂದೆ ಮುಂಡಿಯೂರಿ ಆಶೀರ್ವಚನ ಪಡೆದಿದೆ.
ಕೆಜಿಎಫ್ – ಚಿತ್ರದ ಬಳಿಕ ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬ್ಜ ಬಾರಿ ಸದ್ದು ಮಾಡುತ್ತಿದೆ. ಸಹಜವಾಗಿಯೇ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದ್ದು ಈಗಾಗಲೇ ರಾಜ್ಯ ಮತ್ತು ದೇಶದ ಹಲವು ಭಾಗಗಳಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಸೊಲ್ಡ್ ಓಟ್ ಆಗಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.
ಕಬ್ಜ ಚಿತ್ರದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಟರಾದ ಉಪೇಂದ್ರ ಶಿವಣ್ಣ, ಕಿಚ್ಚ ಸುದೀಪ್ ಅಭಿಮಾನಿಗಳು, ಕಾತುರದಿಂದ ಎದುರು ನೋಡುವಂತೆ ಮಾಡಿದೆ.
ಕಬ್ಜ ಚಿತ್ರ ಬಿಡುಗಡೆಗೆ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪೇಂದ್ರ, ಆರ್.ಚಂದ್ರು ಹಾಗೂ ಕೆ.ಪಿ.ಶ್ರೀಕಾಂತ್, ಸೀಕಲ್ ರಾಮಚಂದ್ರಗೌಡ.
ಚಾರ್ಟಡ್ ಫ್ಲೈಟಲ್ಲಿ ಕಬ್ಜ ಟೀಮ್ ಟೆಂಪಲ್ ರನ್ ಮಾಡಿದು ತಿಮ್ಮಪ್ಪನ ಎದುರು ಕಬ್ಜ ಹಾರ್ಡ್ ಡಿಸ್ಕ್ ಇಟ್ಟು ಪೂಜೆ ಸಲ್ಲಿಸಿದ್ದಾರೆ.