೪ ಸಾವಿರ ಗಡಿ ದಾಟಿದ ಸೋಂಕು

ನವದೆಹಲಿ,ಏ.೫- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಮತ್ತೆ ಏರುಮುಖದಲ್ಲಿದೆ. ಹಲವು ತಿಂಗಳ ಬಳಿಕ ೪ ಸಾವಿರ ಗಡಿ ದಾಟಿದ್ದು ಆತಂಕ ಮೂಡಿಸಿದೆ.
ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೪,೪೩೫ ಮಂದಿಯಲ್ಲಿ ಹೊಸ ಕೋವಿಡ್ ಸೋಂಕು ಕಾಣಿಸಕೊಂಡಿದೆ. ೧೫ ಮಂದಿ ಸಾವನ್ನಪ್ಪಿದ್ದಾರೆ.
ಜೊತೆಗೆ ೧೬೩ ದಿನಗಳ ನಂತರ ಅತ್ಯಧಿಕ ಸೋಂಕು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
೧೫ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಈ ಪೈಕಿ ಕೇರಳ ಮಹಾರಾಷ್ಟ್ರ ತಲಾ ೪, ಛತ್ತೀಸ್‌ಗಡ, ಗುಜರಾತ್, ದೆಹಲಿ, ಉತ್ತರ ಖಾಂಡ, ಹರ್ಯಾಣ, ಕರ್ನಾಟಕ, ಪುದುಚೆರಿ, ತಲಾ ಓರ್ವ ಮಂದಿ ಮತ್ತು ಕೇರಳದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ದಿನೇ ದಿನೇ ಸಕ್ರಿಯ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨೩,೦೯೧ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ೧೭೮೪ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಹೊಸದಾಗಿ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ೪,೪೭,೩೩,೭೯೧ ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಗಳ ಸಂಖ್ಯೆ ಶೇ.೦.೫ ರಷ್ಟು ಇದೆ ಎಂದು ಸಚಿವಾಲಯ ತಿಳಿಸಿದೆ.ದೇಶದಲ್ಲಿ ಹೊಸದಾಗಿ ಸೋಂಕಿನಿಂದ ಮೃತಪಟ್ಟಿರುವವರೂ ಸೇರಿದಂತೆ ಇಲ್ಲಿಯ ತನಕ ೫,೩೦,೯೦೧೬ ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಪ್ರಮಾಣ ಶೇ.೯೮.೭೭ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿ ಪ್ರಮಾಣ ಶೇ. ೩ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೨.೫೬ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.ಹೊಸದಾಗಿ ೧ ಲಕ್ಷಕ್ಕೂ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೯೨.೧೯ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ.