೪೮ನೇ ವರ್ಷಕ್ಕೆ ಕಾಲಿಟ್ಟ ನಟಿ ಕಾಜೋಲ್

ಮುಂಬೈ, ಆ ೫- ಬಾಲಿವುಡ್ ನ ಜನಪ್ರಿಯ ನಟಿ ಕಾಜೋಲ್ ಗೆ ಇಂದು ೪೮ ನೇ ಹುಟ್ಟುಹಬ್ಬ ಸಂಭ್ರಮ.
ಅಪ್ರತಿಮಸುಂದರಿ ಕಾಜೋಲ್ ಹಲವು ವರ್ಷಗಳಿಂದ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಹಿಂದಿ ಚಲನಚಿತ್ರೋದ್ಯಮದಲ್ಲಿ ಹೆಸರು ಮಾಡಿದ್ದಾರೆ.
ಅವರು ೧೯೯೨ ರಲ್ಲಿ ’ಬೇಕುದಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಿನಿರಂಗದಲ್ಲಿ ೩೦ ವರ್ಷ ಪೂರೈಸಿದ್ದಾರೆ. ನಟನಾ ವೃತ್ತಿಜೀವನದ ಸುಮಾರು ೩ ದಶಕಗಳ ನಂತರವೂ, ಕಾಜೋಲ್ ಗುಣಮಟ್ಟದ ಅಭಿನಯಕ್ಕೆ ಸಮಾನಾರ್ಥಕವಾಗಿ ಉಳಿದಿದ್ದಾರೆ.
೨೦೧೮ ರಲ್ಲಿ ನೋ ಫಿಲ್ಟರ್ ನೇಹಾ ಸಂಚಿಕೆಯಲ್ಲಿ ನೇಹಾ ಧೂಪಿಯಾ ಅವರೊಂದಿಗೆ ಮಾತನಾಡುವಾಗ, ಕಾಜೋಲ್ ತಮ್ಮ ಮದುವೆಗೆ ತನ್ನ ತಂದೆಯನ್ನು ಹೇಗೆ ಮನವೊಲಿಸಿದರು ಎಂಬುದನ್ನು ತೆರೆದಿಟ್ಟರು. ನಾನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದಾಗ ನನ್ನ ತಂದೆ ದಿವಂಗತ ಚಲನಚಿತ್ರ ನಿರ್ಮಾಪಕ ಶೋಮು ಮುಖರ್ಜಿ ನನ್ನೊಂದಿಗೆ ಒಂದು ವಾರ ಮಾತನಾಡಲಿಲ್ಲ. ಅವನು ’ನೀನು ಯಾಕೆ ಮದುವೆಯಾಗಲು ಬಯಸುತ್ತೀಯ, ನೀನು ತುಂಬಾ ಚಿಕ್ಕವಳು ಮತ್ತು ನಿನ್ನ ವೃತ್ತಿಜೀವನವು ತುಂಬಾ ಚೆನ್ನಾಗಿದೆ ಎಂದಿದ್ದರು ಎಂದು ಹೇಳಿದ್ದರು.
ಡಿಡಿಎಲ್ಜಿ, ’ಗುಪ್ತ್: ದಿ ಹಿಡನ್ ಟ್ರುತ್’ ’ಕುಚ್ ಕುಚ್ ಹೋತಾ ಹೈ’ ’ಕಭಿ ಖುಷಿ ಕಭಿ ಗಮ್’ ಮೈ ನೇಮ್‌ಇಸ್ಖಾನ್’ ಅವರ ಅತ್ಯುತ್ತಮ ಚಿತ್ರವಾಗಿದೆ.