೪೫ ರಿಂದ ೬೦ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಇಂಜೆಕ್ಷನ್

ರಾಯಚೂರು.ಮಾ.೩೦-ನಗರದ ವಾರ್ಡ್ ನಂ-೦೬ರಲ್ಲಿ ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಕೋವಿಡ್-೧೯ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಸರಕಾರದ ಆದೇಶದ ಮೇರೆಗೆ ಕೋವಿಡ್-೧೯ ಇಂಜೆಕ್ಷನ್ ನ್ನು ೪೫ ರಿಂದ ೬೦ ವರ್ಷ ಮೇಲ್ಪಟ್ಟವರಿಗೆ ಹಾಕಲಾಯಿತು, ಮುಂಜಾಗೃತಾ ಕ್ರಮವಾಗಿ ಸಾರ್ವ ಜನಿಕರಿಗೆ ಮಾಸ್ಕ್‌ನ್ನು ಹಾಕಿಕೊಳ್ಳಲು ಮತ್ತು ಸಾಮಾಜಿಕ ಅಂತರವನ್ನು ಪಾಲಿಸಲು ಸೂಚಿಸಲಾಯಿತು, ಅದರಂತೆ ಖುಷಿಯಿಂದ ಭಾಗವಹಿಸಿ ಕೋವಿಡ್-೧೯ ಇಂಜೆಕ್ಷನನ್ನು ಹಾಕಲಾಯಿತು,
ಬಹುತೇಕ ಹಿರಿಯ ವಯಸ್ಸಿನವರು ಆರೋಗ್ಯದ ಹಿತ ದೃಷ್ಟಿಯಿಂದ ಸರಕಾರ ಕಟ್ಟುನಿಟ್ಟಿನ ಕ್ರಮಹಿಸಿ ಹಿರಿಯರಿಗೆ ೪೫-ರಿಂದ ೬೦ ವರ್ಷ ಮೇಲ್ಪಟ್ಟವರಿಗೆ ಮೊದಲ ಆಧ್ಯತೆ ಕೊಟ್ಟು ಹಿರಿಯ ವಯಸ್ಸಿನವರಿಗೆ ಸುಮಾರು ೧೧೫ ಜನರಿಗೆ ಕೋವಿಡ್ ಇಂಜೆಕ್ಷನ್ ಹಾಕಲಾಯಿತು, ಸ್ವ ಇಚ್ಚೆಯಿಂದ ಬಂದು ಹಾಕಿಸಿಕೊಂಡರು,
ಕಾರ್ಯಕ್ರಮದಲ್ಲಿ ಡಾ.ಲಲಿತಾ ವೈದ್ಯಾಧಿಕಾರಿಗಳ ಹಾಗೂ, ವಾರ್ಡ್ ನಂ-೦೬ರ ನಗರಸಭೆ ಸದಸ್ಯ ಬುಜ್ಜಮ್ಮ ಶಂಕರಪ್ಪ ಘಂಟೆ ಹೊಸೂರು, ಭಾಗವಹಿಸಿ ಸಾರ್ವಜನಿಕರಿಗೆ ಮುಂಜಾಗೃತಾ ಕ್ರಮವಹಿಸಲು ಸಲಹೆಗಳನ್ನು ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಮಲ್ಲಮ್ಮ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಸದರಿ ಗ್ರಾಮದ ಆಶಾ ಕಾರ್ಯಕರ್ತೆಯರಾದ ಶೈಲಮ್ಮ, ಲಕ್ಷ್ಮಿ, ತ್ರಿವೇಣಿ, ಅನಂತಮ್ಮ, ಸಂಧ್ಯಾ, ಯಲ್ಲಮ್ಮ ಮತ್ತು ಗಣಕಯಂತ್ರ ಸಹಾಯಕ ಅರುಣ್ ಕುಮಾರ ಹಾಗೂ ಪದ್ಮ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಭಾಗವಹಿಸಿ ಗ್ರಾಮದ ಹಿರಿಯರಿಗೆ ಇದರ ಕುರಿತು ಸಂಪೂರ್ಣ ಮಾಹಿತಿ ನೀಡಿ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಯಿತು, ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿ ಸದರಿ ಕಾರ್ಯವನ್ನು ಯಶಸ್ವಿಗೊಳಿಸಿದರು.