೪೫ ನಿಮಿಷ ತಡವಾಗಿ ಆರಂಭವಾದ ಮತದಾನ

ಸಿಂಧನೂರು,ಮೇ.೧೦- ೨೦೨೩ ಕರ್ನಾಟಕ ರಾಜ್ಯ ವಿಧಾನ ಸಭೆಯ ಚುನಾವಣೆ ಮತದಾನ ಇಂದು ಬೆಳಿಗ್ಗೆಯಿಂದ ಶಾಂತಿಯುತ ಚುರುಕಿನ ಮತದಾನ ನಡೆದಿದ್ದು ನಗರದ ನಟರಾಜ ಕಾಲೋನಿಯ ಗ್ಲೋರಿ ಸ್ಲೊಲ್ ಮತಗಟ್ಟೆ ೧೨೦ ರಲ್ಲಿ ೭ಗಂಟೆಗೆ ಆರಂಭ ವಾಗುವ ಬದಲು ೪೫ ನಿಮಿಷ ತಡವಾಗಿ ಮತದಾನ ನಡೆಯಿತು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾವದೆ ಅಹಿತಕರ ಘಟನೆ ನಡೆಯದೆ ಶಾಂತಿಯುತ ಅದು ಭಿರಿಸಿನ ಮತದಾನ ನಡೆದಿದ್ದು ಇಲ್ಲಿತನಕ ೩೫% ಮತದಾನ ವಾಗಿದ್ದು ಸಂಜೆ ಯೊಳಗೆ ೮,% ಮತದಾನ ವಾಗಬಹುದು ಎಂದು ತಹಸೀಲ್ದಾರ ಅರುಣ ಕುಮಾರ ಧೇಸಾಯಿ.ಪತ್ರಿಕೆ ಮಾಹಿತಿ ನೀಡಿದರು.
ನಗರದ ನಟರಾಜ ಕಾಲೋನಿ ಮತಗಟ್ಟೆ ೧೨೦ ಮತಗಟ್ಟೆಯಲ್ಲಿ ಬೆಳ್ಗಿ ೭ ಗಂಟೆಗೆ ಮತದಾನ ಆರಂಭವಾಗಬೇಕಾಗಿತ್ತು. ಆದರೆ ಮೀಸನ್ ತಾಂತ್ರಿಕ ದೋಷದಿಂದ ೭ ಗಂಟೆ ೪೫ ನಿಮಿಷಕ್ಕೆ ಮತದಾನ ತಡವಾಗಿ ಆರಂಭವಾಗಿದ್ದು ಕಂಡು ಬಂದಿತು.
ನಗರದ ಸುಕಾಲ ಪೇಟೆ ಮತಗಟ್ಟೆ ೧೬೨ ಅದೆ ರೀತಿ ತಾಲ್ಲೂಕಿನ ಮಸ್ಕಿ ಕ್ಷೇತ್ರದ ಮಲದ ಗುಡ್ಡ ಗ್ರಾಮದ ಮತಗಟ್ಟೆಯೊಂದರಲ್ಲಿ ತಡವಾಗಿ ಮತದಾನ ವಾಗಿದೆ ಎಂದು ತಿಳಿದು ಬಂದಿದೆ ಇದರಿಂದ ಮತದಾನ ಮಾಡಲು ಬಂದು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ಬೇಸರ ವ್ಯಕ್ತಪಡಿಸಿದ್ದು ಕಂಡು ಬಂತು.
ಮತದಾನದ ಬಗ್ಗೆ ನಾವು ಹಾಗೂ ಬಿಎಲ್‌ಒ ಗಳು ಮತ್ತು ಅಧಿಕಾರಿಗಳು ನಿರಂತರವಾಗಿ ಜಾಥ ಮಾಡುವ ಮೂಲಕ ಜಾಗೃತಿ ಮೂಡಿಸಿದ ಕಾರಣ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ತಾಲೂಕಿನಲ್ಲಿ ನಡೆದಿದೆ ಎಂದು ತಹಸೀಲ್ದಾರ ಅರುಣ ಕುಮಾರ ಧೇಸಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಚುನಾವಣೆಯ ಅಧಿಕಾರಿ ಮಂಜುನಾಥ ಗುಂಡುರ ಇದ್ದರು.